ಕ್ರೀಡೆ

ಸೋಲಿನಿಂದ ಹೊರಬಂದ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ವಿರುದ್ಧ ಭರ್ಜರಿ ಜಯ

ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರೈಸಿಂಗ್ ಪುಣೆ ವಿರುದ್ಧ ಸೋತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ವಿರುದ್ಧ ಭರ್ಜರಿ ಜಯ ಗಳಿಸಿ...

ಸೋಲಿನಿಂದ ಹೊರಬಂದ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ವಿರುದ್ಧ ಭರ್ಜರಿ ಜಯ
ಮುಂಬೈ ಇಂಡಿಯನ್ಸ್
Published On :

ಕೋಲ್ಕತ್ತಾ: ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರೈಸಿಂಗ್ ಪುಣೆ ವಿರುದ್ಧ ಸೋತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ವಿರುದ್ಧ ಭರ್ಜರಿ ಜಯ ಗಳಿಸಿ ಸೋಲಿನಿಂದ ಹೊರ ಬಂದಿದೆ.

ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಅಬ್ಬರದ ಬ್ಯಾಟಿ೦ಗ್ ನಡೆಸಿದ ಹಾಲಿ ಚಾ೦ಪಿಯನ್ ಮು೦ಬೈ ಇ೦ಡಿಯನ್ಸ್ ತ೦ಡ ನಾಯಕ ರೋಹಿತ್ ಶಮ೯ರ 84 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ ಕೋಲ್ಕತ್ತಾ ತಂಡವನ್ನು ವಿಕೆಟ್ ಗಳಿಂದ ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೈಟ್ ರೈಡರ್ಸ್ ತಂಡ ನಿಗಧಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. 188 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅಜೇಯ 84, ಪಾರ್ಥಿವ್ ಪಟೇಲ್ 23, ಹಾರ್ದಿಕ್ ಪಾಂಡ್ಯ 9, ಮೇಕ್ಲಿನಘನ್ 20, ಜೋಸ್ ಬಟ್ಲರ್ 41, ಕೈರಾನ್ ಪೊಲ್ಲಾರ್ಡ್ ಅಜೇಯ 1 ರನ್ ಗಳಿಸಿದ್ದಾರೆ. ನೈಟ್ ರೈಡರ್ಸ್ ಪರ ಆಂಡ್ರೆ ರಸೆಲ್, ಪೀಯುಷ್ ಚಾವ್ಲಾ ಹಾಗೂ ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.

ನೈಟ್ ರೈಡರ್ಸ್ ಪರ ರಾಬಿನ್ ಉತ್ತಪ್ಪ 8, ಗಂಭೀರ್ 64, ಮನೀಷ್ ಪಾಂಡೆ 52, ಆಂಡ್ರೆ ರಸೆಲ್ 36, ಕಾಲಿನ್ ಮುನ್ರೋ 4, ಯೂಸುಫ್ ಪಠಾಣ್ ಅಜೇಯ 9 ಹಾಗೂ ಸೂರ್ಯಕುಮಾರ್ ಅಜೇಯ 4 ರನ್ ಗಳಿಸಿದ್ದಾರೆ.

ಮುಂಬೈ ಇಂಡಿಯನ್ಸ್ ಪರ ಮಿಚೆಲ್ ಮೇಕ್ಲಿನಘನ್ 2, ಹಾರ್ದಿಕ್ ಪಾಂಡ್ಯ, ಹರ್ಭಜನ್ ಸಿಂಗ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.