ಕ್ರೀಡೆ

ತಂಡಕ್ಕೆ ಮರಳಿದ ಸುನೀಲ್ ನರೇನ್

ಶಂಕಾಸ್ಪದ ಬೌಲಿಂಗ್ ಸುಳಿಗೆ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡದ ಸ್ಪಿನ್ ಬೌಲರ್ ಸುನೀಲ್ ನರೇನ್ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸೀಮಿತ...

ತಂಡಕ್ಕೆ ಮರಳಿದ ಸುನೀಲ್ ನರೇನ್
ಸುನೀಲ್ ನರೇನ್
Published On :
ಜಮೈಕಾ: ಶಂಕಾಸ್ಪದ ಬೌಲಿಂಗ್ ಸುಳಿಗೆ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡದ ಸ್ಪಿನ್ ಬೌಲರ್ ಸುನೀಲ್ ನರೇನ್ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‍ಗಳ ಸರಣಿಗೆ ಆಯ್ಕೆಯಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದ್ದಾರೆ.
 ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯೂಐಸಿಬಿ) ಆಲ್‍ರೌಂಡರ್ ಡ್ವೇನ್ ಬ್ರಾವೊ ಹಾಗೂ ಕೀರನ್ ಪೊಲಾರ್ಡ್‍ರನ್ನು ಏಕದಿನ ತಂಡದಿಂದ ಕೈಬಿಟ್ಟಿದೆ. ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರಂಭಿಕ ಆಟಗಾರ ಕ್ರಿಸ್‍ಗೇಲ್ ಸರಣಿಗೆ ಅಲಭ್ಯವಾಗಿದ್ದಾರೆ. 
ಚಾಂಪಿಯನ್ಸ್ ಲೀಗ್ ಟಿ-20 ಪಂದ್ಯಾವಳಿಯಲ್ಲಿ ನಿಯಮ ಬಾಹಿರ ಬೌಲಿಂಗ್‍ನಿಂದ ಸುನೀಲ್ ನರೇನ್ 2015ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯಿಂದಲೂ ಹೊರಬಿದ್ದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.