ಭಾರತದ ಗುರ್ ಪ್ರೀತ್ ಸಿಂಗ್ ಬೆಳ್ಳಿ, ಜಿತುಗೆ ಕಂಚು
8ನೇ ಏಷ್ಯನ್ ಏರ್‍ಗನ್ ಶೂಟಿಂಗ್ ಚಾಂಪಿಯನ್‍ಶಿಪ್ ಭರವಸೆಯ ಶೂಟರ್‍ಗಳಾದ ಗುರ್ ಪ್ರೀತ್ ಸಿಂಗ್ ಮತ್ತು ಜಿತು ರೈ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ...

8ನೇ ಏಷ್ಯನ್ ಏರ್‍ಗನ್ ಶೂಟಿಂಗ್ ಚಾಂಪಿಯನ್‍ಶಿಪ್ ಭರವಸೆಯ ಶೂಟರ್‍ಗಳಾದ ಗುರ್ ಪ್ರೀತ್ ಸಿಂಗ್ ಮತ್ತು ಜಿತು ರೈ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಏಷ್ಯನ್ ಏರ್‍ಗನ್ ಚಾಂಪಿಯನ್‍ಶಿಪ್‍ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದಾರೆ. ಮಂಗಳವಾರ ನಡೆದ 10 ಮೀ. ಏರ್ ಪಿಸ್ತೂಲ್ ಫೈನಲ್ ಸ್ಪರ್ಧೆಯಲ್ಲಿ ಗುರ್‍ಪ್ರೀತ್ ಸಿಂಗ್ 197 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರು. ಇನ್ನು ಜಿತು ರೈ 177.6 ಅಂಕಗಳನ್ನು ಗಳಿಸುವ ಮೂಲಕ ಮೂರನೇ ಸ್ಥಾನ ಪಡೆದರು. ಒಂದು ಹಂತದಲ್ಲಿ ಗುರ್ ಪ್ರೀತ್ ಸಿಂಗ್ 5ನೇ ಸ್ಥಾನಕ್ಕೆ ಕುಸಿದಿದ್ದರು ನಂತರ ತರಿಕೆಯ ಆಟ ಪ್ರದರ್ಶಿಸಿ ಉತ್ತಮ ರೀತಿಯಲ್ಲಿ ಹೋರಾಟ ನಡೆಸಿದರು.
28 ವರ್ಷದ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತ ಗುರ್‍ಪ್ರೀತ್ ಸಿಂಗ್, ಸಾಕಷ್ಟು 9ರಪರಿದಿಯಲ್ಲಿ ಗುರಿಯಿಟ್ಟರು. ಇನ್ನು ಓಂಕಾರ್ ಸಿಂಗ್ ಇರಾನ್‍ನ ಮೊಹಮದ್ ಅಹ್ಮದಿ ಅವರ ವಿರುದ್ಧ ಪರಾಭವಗೊಂಡು ಅಂತಿಮ ಸುತ್ತಿನಲ್ಲಿ ಹೊರಬಿದ್ದರು. ಆ ಮೂಲಕ ಫೈನಲ್‍ನಲ್ಲಿ ಹೊರ ಬಿದ್ದ ಮೊದಲ ಭಾರತೀಯ ಶೂಟರ್ ಆದರು. ಮಂಗಳವಾರವೂ ಪದಕ ಲಭಿಸಿರುವುದರಿಂದ ಭಾರತ ಸತತ ಮೂರನೇ ದಿನವು ಪದಕ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


