ರೊನಾಲ್ಡೋನ 25ನೇ ಗರ್ಲ್ ಫ್ರೆಂಡ್!
ಈಗಾಗಲೇ ಎರಡು ಡಜನ್ ಗರ್ಲ್ ಫ್ರೆಂಡ್ ಗಳಿಗೆ ಕೈಕೊಟ್ಟಿರುವ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ, 25ನೇ ಹುಡುಗಿಯೊಂದಿಗೆ ಓಡಾಡ್ತಿದ್ದಾನೆ...

ಈಗಾಗಲೇ ಎರಡು ಡಜನ್ ಗರ್ಲ್ ಫ್ರೆಂಡ್ ಗಳಿಗೆ ಕೈಕೊಟ್ಟಿರುವ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ, 25ನೇ ಹುಡುಗಿಯೊಂದಿಗೆ ಓಡಾಡ್ತಿದ್ದಾನೆ. ಅಲೇಸಿಯಾ ಟೆಡಸ್ಕಿ ಎಂಬ ಇಟಲಿ ಸ್ಪೈಸಿ ಮಾಡಲ್ ಇವಳು.
ವರುಷದ ಕೆಳಗೆ ಕ್ರಿಸ್ಟಿಯಾನೋ ರೊನಾಲ್ಡೋ ಚಡ್ಡಿಯ ಕಿಡ್ನ್ಯಾಪ್ ನಡೆದಿತ್ತು! ಒಂದಲ್ಲ, ಎರಡಲ್ಲ, ಹತ್ತಾರು ಚಡ್ಡಿಗಳು. ಪೋರ್ಚ್‍ಗಲ್‍ನ ಈ ಸಿರಿವಂತ ಫುಟ್ಬಾಲಿಗ ತೊಡುವುದು ಸಿಆರ್7 ಬಾಕ್ಸರ್' ಚಡ್ಡಿಗಳನ್ನು. ಸಾವಿರಾರು ಡಾಲರುಗಳ ಮೌಲ್ಯದ್ದು. ಹಾಗಾದರೆ, ಅಪಹರಿಸಿದವರು ಯಾರು? ಪ್ರೇಯಸಿ ಮನೆಯ ವಾರ್ಡ್‍ರೋಬ್‍ನಲ್ಲಿ ಅಷ್ಟೂ ಚಡ್ಡಿಗಳು ಪತ್ತೆಯಾಗಿದ್ದವು! ಹೌದು, ರೊನಾಲ್ಡೋ ಲವರ್ ಆಗಿದ್ದ ಹಾಲಿವುಡ್ ನಟಿ, ರಷ್ಯಾದ ಸೂಪರ್ ಮಾಡೆಲ್ ಐರಿನಾ ಶೇಕ್ ದೊಡ್ಡ ಚಡ್ಡಿ ಕಳ್ಳಿ!
ರೊನಾಲ್ಡೋಗೆ ಇವಳ ಕೆಲವು ವರ್ತನೆಗಳು ಹಿಡಿಸಲೇ ಇಲ್ಲ. ಇದೇ ಕಾರಣ ನೀಡಿ ಐರಿನಾ ಶೇಕ್ ಳಿಗೆ ರೊನಾಲ್ಡೋ ಕೈಕೊಟ್ಟ. ಅಲ್ಲಿಗೆ ಈತ ಕೈಕೊಟ್ಟ ಗರ್ಲ್ ಫ್ರೆಂಡ್ ಳ ಸಂಖ್ಯೆ 24! ರಿಯಲ್ ಮ್ಯಾಡ್ರಿಡ್‍ನ ದುಬಾರಿ ಆಟಗಾರನಾಗಿರುವ ರೊನಾಲ್ಡೋಗೆ ಈಗಿನ ವಯಸ್ಸು 30. ಈಗೀತ ಇನ್ನೊಂದು ಹುಡ್ಗಿಯ ಜೊತೆ ಸುತ್ತಾಡ್ತಿದ್ದಾನೆ ಅನ್ನೋ ಸುದ್ದಿಯಿದೆ. ಈ ಸುದ್ದಿ ಕೇಳಿ ಐರಿನಾ ಶೇಕ್ ಸುಮ್ಮನಾಗಿದ್ದಾಳಾ? ಇಲ್ಲ. ನಟ ಬ್ರ್ಯಾಡ್ಲಿ ಕೂಪರ್ ಜೊತೆ ಡೇಟಿಂಗ್ ಮಾಡ್ತಿದ್ದಾಳಂತೆ. ಸಾಲದ್ದಕ್ಕೆ ವೋಗ್ ಡಾಟ್‍ಕಾಂ'ಗೆ ಬೆತ್ತಲೆಯ ಫೋಟೋಶೂಟ್ ನಡೆಸಿ, ರೊನಾಲ್ಡೋನನ್ನು ಇನ್ನಷ್ಟು ಕಿಚಾಯಿಸ್ತಿದ್ದಾಳಂತೆ.
ಗರ್ಲ್ ಫ್ರೆಂಡ್ ಇಲ್ಲದಿದ್ರೆ ರೊನಾಲ್ಡೋ ವಿಲಿವಿಲಿ ಒದ್ದಾಡ್ತಾನಂತೆ. ಅವನೇ ಹೇಳಿದಂತೆ, ಗರ್ಲ್ ಫ್ರೆಂಡ್ಸ್ ಇಲ್ಲದಿದ್ರೆ ರಾತ್ರಿ ನಿದ್ರೆ ಬರಲ್ಲ. ಅವರಿದ್ದಾಗಲೂ ನಾನು ನಿದ್ದೆ ಮಾಡುವವನಲ್ಲ. ಗರ್ಲ್ ಫ್ರೆಂಡ್‍ಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದೇನೆ'! ನಮ್ಮಲ್ಲಿ ಎಲ್ರೂ ಮದ್ವೆಗೆ ಹುಡುಗಿ ಹುಡುಕೋ ಲೆವೆಲ್ಲಿನಲ್ಲಿ ಈತ ಗರ್ಲ್ ಫ್ರೆಂಡ್‍ಗೆ ಹುಡುಕಾಡಿದ್ದಾನೆ. ಕೊನೆಗೂ ಸಿಕ್ಕವಳು ಅಲೇಸಿಯಾ ಟೆಡೆಸ್ಕಿ ಎಂಬ ಇಟಾಲಿಯನ್ ಸ್ಪೈಸಿ ಮಾಡೆಲ್.
ಜಗತ್ತಿಗೆ ಇವಳೆಷ್ಟು ಅಪರಿಚಿತೆ ಅಂದ್ರೆ, ಇವಳ ಮೇಲೆ ವಿಕಿಪೀಡಿಯಾ ಇನ್ನೂ ಪ್ರೋಫೈಲ್ ಪುಟವನ್ನೇ ರಚಿಸಿಲ್ಲ. ಆದರೆ, ಆರೇಳು ಸಲ ರೊನಾಲ್ಡೋ ಜೊತೆಗೆ ರಾತ್ರಿ ಕಳೆದಿದ್ದಾಳಂತೆ. ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂ ಖಾತೆ ತೆರೆದಿರುವ ಅಲೇಸಿಯಾ ಟೆಡೆಸ್ಕಿಗೆ ಸಿಕ್ಕಾಪಟ್ಟೆ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ರೊನಾಲ್ಡೋ ಜೊತೆಗೆ ತಾನಿರುವ ಫೋಟೋ ಹಾಕುತ್ತೀನೆಂದು ಈಗ ಹೇಳಿಕೊಂಡಿದ್ದಾಳೆ.
ರಿಯಲ್ ಮ್ಯಾಡ್ರಿಡ್‍ನ ಇತ್ತೀಚೆಗಿನ ಪಂದ್ಯಗಳಿಗೆ ಅಲೇಸಿಯಾ ಪ್ರತ್ಯಕ್ಷ ಸಾಕ್ಷಿಯಾಗಿದ್ದಳಂತೆ. ಅಂದಹಾಗೆ, ಮೊದಲ ಗರ್ಲ್ ಫ್ರೆಂಡನ್ನು ಬುಟ್ಟಿಗೆ ಹಾಕ್ಕೊಳ್ಳೋವಾಗ ರೊನಾಲ್ಡೋ ವಯಸ್ಸು 18. ಜೋರ್ಡಾನ್ ಜಾರ್ಡೆಲ್ ಜೊತೆ ಎರಡು ವರುಷ ಸುತ್ತಾಡಿದ ಮೇಲೆ ಯಾಕೋ ಬೋರ್ ಆಯಿತು. ನಂತರ ಇಸಬೆಲ್ಲಾ ಫಿಗ್ಯುರಿಯಾಳ ಮೇಲೆ ಕಣ್ಣಿಟ್ಟ. ಈಕೆಯ ಜೊತೆ ಈತ ಕಳೆದಿದ್ದು ಕೇವಲ ಒಂದೇ ವರುಷ.
ನಂತರ ಬಂದ ಯಾವ ಪ್ರೇಯಸಿ ಜೊತೆಗೂ ವರುಷದ ಮೇಲೆ ಸಂಬಂಧ ಇಟ್ಟುಕೊಳ್ಳಲಿಲ್ಲ. ಐದಾರು ತಿಂಗಳಿಗೆ ಒಬ್ಬೊಬ್ಬಳನ್ನು ಬದಲಿಸುತ್ತಲೇ ಹೋದ. ಕೊನೆಗೆ ಸಿಕ್ಕ ಐರಿನಾ ಶೇಕ್ ಜೊತೆ ಇನ್ನೇನು ಮದ್ವೆನೂ ಆಗ್‍ಹೋಯ್ತು ಅನ್ನೋವಾಗ, ಆ ಪ್ರೇಮಕ್ಕೂ ಈತ ಎಳ್ಳುನೀರು ಬಿಟ್ಟ. ಕ್ರಿಸ್ಟಿಯಾನೋ ಕೈ ಹಿಡಿದು ಸುತ್ತಾಡುವ ಈ ಪ್ರೇಯಸಿಯರಿಗೂ ಒಂದು ಲಾಭ ಇರುತ್ತೆ. ಮಾಡೆಲ್ ಜಗತ್ತಿಗೋ, ನಟನೆಗೋ ಇವರೆಲ್ಲ ಹೊಸಬರೇ. ರೊನಾಲ್ಡೋ ಜೊತೆ ಪ್ರೇಮ ಕುದುರಿದ ಮೇಲೆ ವೋಗ್ ಮ್ಯಾಗಜಿನ್ ಇವರ ಅರೆನಗ್ನ ಫೋಟೋಗಳನ್ನು ಕವರ್ ಫೇಜ್‍ನಲ್ಲಿ ಮುದ್ರಿಸುತ್ತದೆ.
ಲೋರಿಯಲ್‍ನಂಥ ಬ್ರ್ಯಾಂಡೆಡ್ ಕಂಪನಿಗಳಿಗೆ ರಾಯಭಾರಿ ಆಗ್ತಾರೆ. ಹಾಲಿವುಡ್ ಸಿನಿಮಾಗಳಲ್ಲಿ, ಬಿಗ್‍ಬಾಸ್‍ಗಳಲ್ಲಿ ಚಾನ್ಸ್ ಸಿಗುತ್ತೆ. ಈ ಪ್ರಸಿದ್ಧಿಗಿರಿ ತುಸು ಜಾಸ್ತಿ ಆಯಿತು ಎನ್ನುವಾಗ ರೊನಾಲ್ಡೋಗೂ ಸಖತ್ ಕೈಕೊಟ್ಟು ಹೋಗ್ತಾರೆ! 25ನೇ ಪ್ರೇಯಸಿ ಆಗಿರುವ ಅಲೇಸಿಯಾ ಟೆಡೆಸ್ಕಿಯೇ ಕೊನೆಯೋ, ಈ ಪಟ್ಟಿ ಇನ್ನೂ ಮುಂದುವರಿಯುತ್ತಾ? ಸ್ವತಃ ರೊನಾಲ್ಡೋಗೆ ಗೊತ್ತಿದ್ದಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


