ದಾಲ್ಮಿಯಾ ನಿಧನ: ಬಿಸಿಸಿಐ ಅಧ್ಯಕ್ಷ ಸ್ಥಾನದ ಗೊಂದಲ
ಜಗಮೋಹನ್ ದಾಲ್ಮಿಯಾ ಅವರ ನಿಧನದ ನಂತರ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತುಂಬುವ ಬಗ್ಗೆ ಈಗ ಸಾಕಷ್ಟು...

ನವದೆಹಲಿ: ಜಗಮೋಹನ್ ದಾಲ್ಮಿಯಾ ಅವರ ನಿಧನದ ನಂತರ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನವನ್ನು ತುಂಬುವ ಬಗ್ಗೆ ಈಗ ಸಾಕಷ್ಟು ಗೊಂದಲಗಳು ಮೂಡಿವೆ.
ಬಿಸಿಸಿಐ ಸಂವಿಧಾನದ ಪ್ರಕಾರ, ಅಧಿಕಾರದ ಅವಧಿಯ ಮಧ್ಯದಲ್ಲಿ ಮಂಡಳಿಯ ಅಧ್ಯಕ್ಷರು ವಿಧಿವಶರಾದರೆ, ಸಂಸ್ಥೆಯ ಕಾರ್ಯದರ್ಶಿ 15 ದಿನಗಳ ಒಳಗಾಗಿ ವಿಷೇಶ ಮಹಾ ಸಭೆಯನ್ನು ಕರೆದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು.
ಮೃತಪಟ್ಟ ಅಧ್ಯಕ್ಷ ಯಾವ ವಲಯದಿಂದ ಆಯ್ಕೆಯಾಗಿರುತ್ತಾರೊ ಆ ವಲಯದ ಬೆಂಬಲದಿಂದ, ಅವಧಿ ಪೂರ್ಣಗೊಳ್ಳುವವರೆಗೂ ಹೊಸ ಅಧ್ಯಕ್ಷ ಆಯ್ಕೆಯಾಗಬೇಕು. ಇನ್ನು ಈಗಾಗಲೇ ನಡೆಯಬೇಕಿದ್ದ ವಾರ್ಷಿಕ ಮಹಾ ಸಭೆಯನ್ನು ಶ್ರೀನಿವಾಸನ್ ಭಾಗವಹಿಸುವಿಕೆಯ ಬಗ್ಗೆ ಸುಪ್ರೀಂ ಕೋರ್ಟ್‍ನಿಂದ ಸ್ಪಷ್ಟನೆ ಪಡೆಯುವವರೆಗೂ ನಡೆಸಲಾಗುತ್ತಿಲ್ಲ.
ಈ ಮಧ್ಯೆ ಈ ವಿಷೇಶ ಮಹಾ ಸಭೆಯನ್ನು ನಡೆಸುವ ಬಗ್ಗೆ ಕಾರ್ಯದರ್ಶಿ ಅನುರಾಗ್ ಠಾಕೂರ್ ಯಾವ ರೀತಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಗೊಂದಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


