ಕ್ರೀಡೆ

ಭಾರತ-ಪಾಕ್ ದ್ವಿಪಕ್ಷಿಯ ಸರಣಿ ನಡೆಸುವಂತೆ ಭಾರತದ ಮುಂದೆ ಮಂಡಿಯೂರಲ್ಲ: ಪಿಸಿಬಿ ಅಧ್ಯಕ್ಷ

ಭಾರತ-ಪಾಕ್ ದ್ವಿಪಕ್ಷೀಯ ಸರಣಿ ನಡೆಯದಿದ್ದರೂ ಪರ್ವಾಗಿಲ್ಲ. ನಾವೆಂದಿಗೂ ಭಾರತ ಮುಂದೆ ಮಂಡಿಯೂರಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಅಧ್ಯಕ್ಷ...

ಭಾರತ-ಪಾಕ್ ದ್ವಿಪಕ್ಷಿಯ ಸರಣಿ ನಡೆಸುವಂತೆ ಭಾರತದ ಮುಂದೆ ಮಂಡಿಯೂರಲ್ಲ: ಪಿಸಿಬಿ ಅಧ್ಯಕ್ಷ
ಶಹರ್ ಯಾರ್ ಖಾನ್
Published On :
ಕರಾಚಿ: ಭಾರತ-ಪಾಕ್ ದ್ವಿಪಕ್ಷೀಯ ಸರಣಿ ನಡೆಯದಿದ್ದರೂ ಪರ್ವಾಗಿಲ್ಲ. ನಾವೆಂದಿಗೂ ಭಾರತ ಮುಂದೆ ಮಂಡಿಯೂರಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಿಸಿಬಿ) ಅಧ್ಯಕ್ಷ ಶಹರ್ ಯಾರ್ ಖಾನ್ ಹೇಳಿದ್ದಾರೆ. 
ಭಾರತ-ಪಾಕ್ ಸರಣಿ ನಡೆಯುವುದಕ್ಕೆ ಶಹರ್ ಯಾರ್ ಖಾನ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಈಗ ಅನೇಕ ವರ್ಷಗಳ ಕಾಲ ಸರಣಿ ನಡೆದೇ ಇಲ್ಲ.  ದ್ವಿಪಕ್ಷೀಯ ಸರಣಿ ನಡೆಯದಿದ್ದರೆ ಅದೇನೂ ದೊಡ್ಡ ವಿಷಯವಲ್ಲ ಎಂದು ಈಗ ರಾಗ ಎಳೆದಿದ್ದಾರೆ. 
ಇದೇ ವೇಳೆ ಶಹರ್‌ಯಾರ್ ತಾವು ಮಾಜಿ ಟೆಸ್ಟ್ ನಾಯಕ ಜಹೀರ್ ಅಬ್ಬಾಸ್ ಅವರಿಗೆ ತಮ್ಮ ಪ್ರಭಾವ ಬೀರಿ ಭಾರತದ ಮಂಡಳಿಗೆ ಸರಣಿ ಆಡುವಂತೆ ಮನದಟ್ಟು ಮಾಡಬೇಕೆಂದು ತಾವು ಕೇಳಿರಲಿಲ್ಲ ಎಂದೂ ಸ್ಪಷ್ಟಪಡಿಸಿದರು. ಜಹೀರ್ ಅವರು ಐಸಿಸಿ ಅಧ್ಯಕ್ಷರಾಗಿ ಭಾರತಕ್ಕೆ ತೆರಳಿದ್ದರೇ ಹೊರತು ಪಿಸಿಬಿಯ ಸಂದೇಶಕಾರರಾಗಿ ತೆರಳಿರಲಿಲ್ಲ.  ಪಾಕ್-ಭಾರತ ಸರಣಿಯ ಪುನಶ್ಚೇತನಕ್ಕೆ ಜಹೀರ್ ನೆರವನ್ನು ನಾವು ಕೋರಿರಲಿಲ್ಲ. ಅವರು ಐಸಿಸಿ ಅಧ್ಯಕ್ಷರಾಗಿ ಭಾರತಕ್ಕೆ ತೆರಳಿದ್ದರು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.