ಕ್ರೀಡೆ

ವಿಶ್ವ ಗುಂಪಿಗೆ ಭಾರತ ಅರ್ಹತೆ: ಬೋಪಣ್ಣ

ಸದ್ಯದಲ್ಲೇ ಆರಂಭಗೊಳ್ಳಲಿರುವ ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯಾವಳಿಯಲ್ಲಿ, ಹಾಲಿ ನಂಬರ್ ಒನ್ ತಂಡವಾದ ಜೆಕ್ ಗಣರಾಜ್ಯದ ವಿರುದ್ಧ ಭಾರತ...

ವಿಶ್ವ ಗುಂಪಿಗೆ ಭಾರತ ಅರ್ಹತೆ: ಬೋಪಣ್ಣ
ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ
Published On :
ನವದೆಹಲಿ: ಸದ್ಯದಲ್ಲೇ ಆರಂಭಗೊಳ್ಳಲಿರುವ ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯಾವಳಿಯಲ್ಲಿ, ಹಾಲಿ ನಂಬರ್ ಒನ್ ತಂಡವಾದ ಜೆಕ್ ಗಣರಾಜ್ಯದ ವಿರುದ್ಧ ಭಾರತ ಗೆಲುವು ಸಾಧಿಸುವ ಮೂಲಕ ಮತ್ತೆ ವಿಶ್ವ ಗುಂಪಿಗೆ ಅರ್ಹತೆ ಪಡೆಯುತ್ತದೆ ಎಂಬ ವಿಶ್ವಾಸವನ್ನು ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ವ್ಯಕ್ತಪಡಿಸಿದ್ದಾರೆ. 
ಇಲ್ಲಿನ ದೆಹಲಿ ಲಾನ್ ಟೆನಿಸ್ ಅಸೋಸಿಯೇಷನ್‍ನಲ್ಲಿ ಸೆ. 18ರಿಂದ ಶುರುವಾಗಲಿರುವ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿರುವ ಬೋಪಣ್ಣ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಶ್ವ ಟೆನಿಸ್‍ನಲ್ಲಿ ಟಾಪ್ 100ರಲ್ಲಿ ಕಾಣಿಸಿಕೊಂಡಿರುವ ಇಬ್ಬರು ಆಟಗಾರರನ್ನು ಜೆಕ್ ತಂಡ ಒಳಗೊಂಡಿದೆ. ಆದರೆ, ಶ್ರೇಯಾಂಕ ಇಲ್ಲಿ ಮುಖ್ಯವಾಗುವುದಿಲ್ಲ. ತವರಿನಲ್ಲಿ ನಾವು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪ್ರವಾಸಿಗರನ್ನು ಮಣಿಸಿ ವಿಶ್ವ ಗ್ರೂಪ್‍ಗೆ ಮರಳುವ ವಿಶ್ವಾಸವಿದೆ ಎಂದು ಬೋಪಣ್ಣ ಪುನರುಚ್ಚರಿಸಿದರು. 
ನಿರ್ಧಾರ ಸಾನಿಯಾಗೆ ಬಿಟ್ಟದ್ದು 
ಈ ಮಧ್ಯೆ ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಹಿರಿಯ ಟೆನಿಸಿಗ ಲಿಯಾಂಡರ್ ಪೇಸ್ ಜತೆಗೆ ಆಡಬೇಕೋ ಇಲ್ಲವೇ ರೋಹನ್ ಬೋಪಣ್ಣ ಜತೆಗೆ ಆಡಬೇಕೋ ಎಂಬುದನ್ನು ಸ್ವತಃ ಸಾನಿಯಾ ನಿರ್ಧರಿಸಲಿದ್ದಾರೆ ಎಂದು ಬೋಪಣ್ಣ ತಿಳಿಸಿದ್ದಾರೆ. 
'ಪ್ರಸಕ್ತ ವಿಶ್ವದ ನಂ.1 ಆಟಗಾರ್ತಿಯಾಗಿರುವ ಸಾನಿಯಾ ಜತೆಗೆ ನಾನು ಆಡಲು ಬಯಸುತ್ತೇನೆ. ಇದೇ ವೇಳೆ ಪೇಸ್ ಕೂಡ ಅವರೊಟ್ಟಿಗೆ ಆಡಲು ಇಚ್ಛಿಸುತ್ತಾರೆ. ಹೀಗಾಗಿ ನಮ್ಮಿಬ್ಬರ ಪೈಕಿ ಯಾರು ಅವರೊಂದಿಗೆ ಆಡುತ್ತಾರೆ ಎಂಬುದು ಸಾನಿಯಾ ಅವರ ನಿರ್ಧಾರವನ್ನು ಅವಲಂಬಿಸಿದೆ'' ಎಂದು ದೆಹಲಿಯಲ್ಲಿ ರೋಹನ್ ಬೋಪಣ್ಣ ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಂದಹಾಗೆ ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪೇಸ್ ಹಾಗೂ ಸಾನಿಯಾ ಜೋಡಿ ಜತೆಯಾಗಿ ಆಡಿದ್ದರಾದರೂ, ಕ್ವಾರ್ಟರ್ ಫೈನಲ್‍ನಲ್ಲಿ ಸೋಲನುಭವಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.