ಕ್ರೀಡೆ

ಲಿಯಾಂಡರ್-ಹಿಂಗಿಸ್‍ಗೆ ಯುಎಸ್ ಓಪನ್ ಗರಿ

ಭಾರತದ ಹೆಸರಾಂತ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಹಾಗೂ ಅವರ ಜತೆಯಾಟಗಾರ್ತಿ ಮಾರ್ಟಿನಾ ಹಿಂಗಿಸ್ ಜೋಡಿ ವರ್ಷದ...

ಲಿಯಾಂಡರ್-ಹಿಂಗಿಸ್‍ಗೆ ಯುಎಸ್ ಓಪನ್ ಗರಿ
ಯುಎಸ್ ಓಪನ್‍ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಪೇಸ್-ಹಿಂಗಿಸ್ ಜೋಡಿ ಟ್ರೋಫಿಯೊಂದಿಗೆ ಕ್ಯಾಮರಾಗೆ ಫೋಸ್ ನೀಡಿದ್ದು ಹೀಗೆ.
Published On :

ನ್ಯೂಯಾರ್ಕ್: ಭಾರತದ ಹೆಸರಾಂತ ಡಬಲ್ಸ್ ಪ್ರವೀಣ ಲಿಯಾಂಡರ್ ಪೇಸ್ ಹಾಗೂ ಅವರ ಜತೆಯಾಟಗಾರ್ತಿ ಮಾರ್ಟಿನಾ ಹಿಂಗಿಸ್ ಜೋಡಿ ವರ್ಷದ ಕೊನೆಯ ಗ್ರಾಂಡ್‍ಸ್ಲಾಮ್ ಟೂರ್ನಿ ಎನಿಸಿರುವ ಯುಎಸ್ ಓಪನ್‍ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಎನಿಸಿದೆ.

ಶುಕ್ರವಾರ ತಡರಾತ್ರಿ ನಡೆದ ಅಂತಿಮ ಸುತ್ತಿನ ಸೆಣಸಾಟದಲ್ಲಿ ನಾಲ್ಕನೇ ಶ್ರೇಯಾಂಕಿತ ಇಂಡೋ-ಸ್ವಿಸ್ ಜೋಡಿ ಅಮೆರಿಕದ ಸ್ಯಾಮ್ ಕ್ವೆರ್ರಿ ಹಾಗೂ ಬೆಥಾನಿ ಮ್ಯಾಟೆಕ್ ಸ್ಯಾಂಡ್ಸ್ ಜೋಡಿಯನ್ನು 6-4, 3-6(10/7) ಸೆಟ್ಗಳಿಂದ ಜಯ ಪಡೆದು ಚಾಂಪಿಯನ್ ಆಯಿತು.

ಈ ಋತುವಿನ ಆಸ್ಟ್ರೇಲಿಯಾ ಹಾಗೂ ವಿಂಬಲ್ಡನ್ ಫೈನಲ್‍ನಲ್ಲಿ ಒಂದೇ ಒಂದು ಸೆಟ್ ಹಿನ್ನಡೆ ಅನುಭವಿಸದೆ ವಿಜೇತರಾಗಿದ್ದ 42ರ ಹರಯದ ಪೇಸ್ ಹಾಗೂ ಹಿಂಗಿಸ್ ಜೋಡಿ, ಯುಎಸ್ ಓಪನ್ ಫೈನಲ್‍ನಲ್ಲಿ ಮಾತ್ರ ರೋಚಕ ಜಯ ಸಾಧಿಸಿತು. ನಿರ್ಣಾಯಕವಾದ ಟೈಬ್ರೇಕ್ ಸೆಟ್‍ನಲ್ಲಿ 1-4ರ ಹಿನ್ನಡೆಯ ಮಧ್ಯೆಯೂ ಪ್ರಚಂಡಗತಿಯಲ್ಲಿ ತಿರುಗಿಬಿದ್ದು ಜಯಶಾಲಿಯಾಯಿತು.

ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿಯೂ ಈ ಜೋಡಿ ಪ್ರಶಸ್ತಿ ಜಯಿಸಿತ್ತಲ್ಲದೆ, ಅದೇ ಹುರುಪಿನಲ್ಲಿ ಅಮೆರಿಕ ಓಪನ್ ಪ್ರಶಸ್ತಿಯನ್ನೂ ಜಯಿಸುವ ಮೂಲಕ ಈ ಋತುವಿನಲ್ಲಿ
ಮೂರನೇ ಗ್ರಾಂಡ್‍ಸ್ಲಾಮ್ ಪ್ರಶಸ್ತಿಗೆ ಭಾಜನವಾಯಿತು. ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಒಂದನ್ನು ಹೊರತುಪಡಿಸಿ ಈ ಋತುವಿನ ಮಿಕ್ಕ ಎಲ್ಲದರಲ್ಲೂ ಪ್ರಶಸ್ತಿ ಗೆದ್ದ ಹಿರಿಮೆ ಪೇಸ್, ಹಿಂಗಿಸ್ ಅವರದ್ದು.

ಎಲ್ಲಕ್ಕಿಂತ ಮಿಗಿಲಾಗಿ 1969ರ ಬಳಿಕ ಋತುವೊಂದರ ನಾಲ್ಕು ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಪೈಕಿ ಮೂರರಲ್ಲಿ ಜಯಭೇರಿ ಬಾರಿಸಿದ ಮೊದಲ ಜೋಡಿ ಕೂಡ ಇದೇ ಪೇಸ್, ಹಿಂಗಿಸ್ ಎಂಬುದು ಗಮನೀಯ. 46 ವರ್ಷಗಳ ಹಿಂದೆ ಮಾರ್ಗರೆಟ್ ಕೋರ್ಟ್ ಮತ್ತು ಮ್ಯಾರ್ಟಿ ರೀಸೆನ್ ಇಂಥದ್ದೇ ಸಾಧನೆ ಮಾಡಿತ್ತು. ಈ ಮೂಲಕ ಪೇಸ್ ಮಿಶ್ರ ಡಬಲ್ಸ್ ನಲ್ಲಿ ಅತಿಹೆಚ್ಚು (9) ಪ್ರಶಸ್ತಿಗಳನ್ನು ಗೆದ್ದ ಜಗತ್ತಿನ ಎರಡನೇ ಆಟಗಾರ ಎನಿಸಿದರು. ಅಮೆರಿಕದ ಟೆನಿಸ್
ದಂತಕತೆ ಹಾಗೂ ಪೇಸ್ ಅವರ ಹಳೆಯ ಜತೆಯಾಟಗಾರ್ತಿ ಮಾರ್ಟಿನಾ ನವ್ರಾಟಿಲೊವಾ (10) ಜಗತ್ತಿನಲ್ಲೇ ಅತಿಹೆಚ್ಚು ಮಿಶ್ರ ಡಬಲ್ಸ್ ಗೆದ್ದ ಆಟಗಾರ್ತಿ ಎನಿಸಿದ್ದಾರೆ. ಅಂದಹಾಗೆ ಜತೆಗೆ
ವೃತ್ತಿ ಬದುಕಿನಲ್ಲಿ ಇದು ಅವರಿಗೆ 17ನೇ ಗ್ರಾಂಡ್‍ಸ್ಲಾಮ್ ಪ್ರಶಸ್ತಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.