ಸುಪ್ರೀಂ ಕೋರ್ಟ್ ಮೊರೆ ಹೋದ ಧೋನಿ
ಮ್ಯಾಗಜೀನ್ ಮುಖಪುಟದಲ್ಲಿ ಹಿಂದೂ ದೇವತೆ ವಿಷ್ಣುವಿನ ವೇಷದಲ್ಲಿ ಕಾಣಿಸಿಕೊಂಡು ವಿವಿಧ ಕಂಪನಿಗಳ ಉತ್ಪನ್ನವನ್ನು ತನ್ನ ಕೈಗಳಲ್ಲಿ ಹಿಡಿದಿರುವ ಚಿತ್ರದ....

ಮ್ಯಾಗಜೀನ್ ಮುಖಪುಟದಲ್ಲಿ ಹಿಂದೂ ದೇವತೆ ವಿಷ್ಣುವಿನ ವೇಷದಲ್ಲಿ ಕಾಣಿಸಿಕೊಂಡು ವಿವಿಧ ಕಂಪನಿಗಳ ಉತ್ಪನ್ನವನ್ನು ತನ್ನ ಕೈಗಳಲ್ಲಿ ಹಿಡಿದಿರುವ ಚಿತ್ರದ ವಿರುದ್ಧ ಕರ್ನಾಟಕ ನ್ಯಾಯಾಲಯದಲ್ಲಿ ಹೂಡಲಾಗಿರುವ ಕ್ರಿಮಿನಲ್ ಮೊಕದ್ದಮೆ ಕುರಿತ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
2013ರ ಏಪ್ರಿಲ್‍ರಲ್ಲಿ ಬಿಸಿನೆಸ್ ಟುಡೆ ಮ್ಯಾಗಜಿನ್ ಈ ವಿವಾದಾತ್ಮಕ ಫೋಟೊವನ್ನು ದ ಗಾಡ್ ಆಫ್ ಬಿಗ್ ಡೀಲ್ಸ್ ತಲೆ ಬರಹದೊಂದಿಗೆ ಪ್ರಕಟಿಸಿತ್ತು. ನಂತರ ಈ ವಿಷಯ ಕರ್ನಾಟಕ ಹೈಕೋರ್ಟ್ ಮೇಟ್ಟಿಲೇರಿತ್ತು. ಈ ಫೋಟೊ ಪ್ರಕಟಣೆಯಿಂದ ಹಿಂದೂಧರ್ಮದ ಜನರ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪದಿಂದಾಗಿ ಧೋನಿ ಹಾಗೂ ಮ್ಯಾಗಜಿನ್ ಮುದ್ರಕ ಹಾಗೂ ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿತ್ತು. ಹಾಗಾಗಿ ಧೋನಿ ಈ ಕುರಿತ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


