ಕ್ರೀಡೆ

ಸ್ಟೀವನ್ ಸ್ಮಿತ್ ಬಗ್ಗೆ ಬ್ರೆಂಡನ್ ಬೇಸರ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಶನಿವಾರ (ಸೆ. 5) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ನಡೆದುಕೊಂಡ ರೀತಿ ಅವರಲ್ಲಿನ ಅಪ್ರಭುದ್ಧತೆ...

ಸ್ಟೀವನ್ ಸ್ಮಿತ್ ಬಗ್ಗೆ ಬ್ರೆಂಡನ್ ಬೇಸರ
ಕ್ರಿಕೆಟ್
Published On :

ಲಂಡನ್: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಶನಿವಾರ (ಸೆ. 5) ನಡೆದಿದ್ದ ದ್ವಿತೀಯ ಏಕದಿನ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ನಡೆದುಕೊಂಡ ರೀತಿ ಅವರಲ್ಲಿನ ಅಪ್ರಭುದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಬ್ರೆಂಡನ್ ಮೆಕಲಂ ಹೇಳಿದ್ದಾರೆ.

ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ ಮನ್ ಬೆನ್ ಸ್ಟೋಕ್ಸ್, ಸ್ಮಿತ್ ಅವರ ಎಸೆತವೊಂದನ್ನು ಎದುರಿಸಿದಾಗ ಚೆಂಡು ಉರುಳುತ್ತಾ ಸ್ಮಿತ್ ಕೈ  ಸೇರಿತ್ತು. ಅಷ್ಟರಲ್ಲಿ, ಸ್ಟೋಕ್ಸ್ ಕ್ರೀಸ್ ಬಿಟ್ಟಿದ್ದರು. ಆದರೆ, ಚೆಂಡು ಸ್ಮಿತ್ ಕೈ ಸೇರಿದ್ದನ್ನು ಗಮನಿಸಿ ಪುನಃ ಕ್ರೀಸ್ ಗೆ ಮರಳಲು ಯತ್ನಿಸಿದ್ದರು.

ಅಷ್ಟರಲ್ಲಿ, ಸ್ಮಿತ್ ಚೆಂಡನ್ನು ಸ್ಟ್ರೈಕರ್ ಎಂಡ್ ನ ವಿಕೆಟ್‍ಗೆ ಎಸೆದರು. ಆದರೆ, ಆ ಚೆಂಡನ್ನು ಬಾಂಡ್ ಹಿಡಿದು ನಿಲ್ಲಿಸುವ ಮೂಲಕ ವಿಕೆಟ್ ಗೆ ಅಪ್ಪಳಿಸಿದಂತೆ ತಡೆದರು. ಇದನ್ನು ಆರೋಪಿಸಿದ ಸ್ಮಿತ್ ಪದೇ ಪದೇ ಅಂಪೈರ್ ಗೆ ಔಟೆಂದು ಮನವಿ ಸಲ್ಲಿಸಿದರು. ಮೈದಾನದಲ್ಲಿದ್ದ ಅಂಪೈರ್‍ಗಳಾದ ಕುಮಾರ ಧರ್ಮಸೇನಾ ಹಾಗೂ ಟಿಮ್ ರಾಬಿನ್ಸನ್ ಸಹ ಗೊಂದಲಕ್ಕೊಳಗಾದರು.

ನಂತರ, ಈ ಇಬ್ಬರೂ ಪ್ರಕರಣವನ್ನು ಟಿವಿ ಅಂಪೈರ್ ಜೊಯೆಲ್ ವಿಲ್ಸನ್ ಗೆ ವರ್ಗಾಯಿಸಿದರು. ವಿಡಿಯೋ ಕ್ಲಿಪಿಂಗ್ ಗಳನ್ನು ಅವಲೋಕಿಸಿದ ವಿಲ್ಸನ್, ಸ್ಟೋಕ್ಸ್ ಗೆ ಔಟ್ ನೀಡುವಂತೆ ಮೈದಾನದ ಅಂಪೈರ್ ಗಳಿಗೆ ಮಾರ್ಗದರ್ಶನ ನೀಡಿದರು. ಈ ಘಟನೆಯನ್ನು ಮೆಕಲಂ ತೀವ್ರವಾಗಿ ಖಂಡಿಸಿದ್ದಾರೆ.

ಸ್ಟೋಕ್ಸ್ ಅವರ ವಿಚಾರದಲ್ಲಿ ಸ್ಮಿತ್ ಅವರ ಈ ವರ್ತನೆ ಸರಿಯಲ್ಲ. ಸ್ಮಿತ್ ಬಗ್ಗೆ ನನಗೇನೂ ವೈಯಕ್ತಿಕವಾಗಿ ದ್ವೇಷವಿಲ್ಲ. ಆದರೆ, ಮೈದಾನದ ಅಂಪೈರ್‍ಗಳನ್ನು ಗೊಂದಲಕ್ಕೀಡು ಮಾಡುವಂತೆ ಅವರು ಪದೇ ಪದೇ ಮನವಿ ಸಲ್ಲಿಸಿದ್ದು ಮಾತ್ರ ಕ್ರೀಡೋತ್ಸಾಹಕ್ಕೆ ಧಕ್ಕೆ ತರುವಂಥದ್ದು. ಅವರ ಜಾಗದಲ್ಲಿ ಆಸೀಸ್ ನಾಯಕ ಕ್ಲಾರ್ಕ್ ಇದ್ದಿದ್ದರೆ, ಅವರು ಹೀಗೆ ಸ್ಟೋಕ್ಸ್ ಔಟಾಗಲೇಬೇಕೆಂದು ಹಠ ಹಿಡಿಯುತ್ತಿರಲಿಲ್ಲ. ಮುಂದೆ ಸ್ಮಿತ್ ಈ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ ಎಂದಿದ್ದಾರೆ ಮೆಕಲಂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.