ಛೆಟ್ರಿ ಪಡೆಗೆ 155ನೇ ರ್ಯಾಂಕ್
ಸುನೀಲ್ ಛೆಟ್ರಿ ಸಾರಥ್ಯದ ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಮುನ್ನಡೆ ಪಡೆದು ಪ್ರಸಕ್ತ 155ನೇ ಸ್ಥಾನದಲ್ಲಿದೆ...

ನವದೆಹಲಿ: ಸುನೀಲ್ ಛೆಟ್ರಿ ಸಾರಥ್ಯದ ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಮುನ್ನಡೆ ಪಡೆದು ಪ್ರಸಕ್ತ 155ನೇ ಸ್ಥಾನದಲ್ಲಿದೆ.
2018ರ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಎರಡು ಸೋಲುಗಳನ್ನು ಕಂಡದ್ದರಿಂದ ಜುಲೈಗೂ ಮುಂಚೆ 15 ಸ್ಥಾನಗಳ ಹಿನ್ನಡೆ ಅನುಭವಿಸಿ 156ಕ್ಕೆ ಕುಸಿದಿದ್ದ ಭಾರತ ತಂಡ, ಇತ್ತೀಚೆಗಷ್ಟೇ ಪುಣೆಯಲ್ಲಿ ನಡೆದಿದ್ದ ನೇಪಾಳ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದೇ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಛೆಟ್ರಿ ಪಡೆ ಇರಾನ್ ವಿರುದ್ಧ ಸೆಣಸಲಿದೆ. ಇನ್ನುಳಿದಂತೆ ಅರ್ಜೆಂಟೀನಾ ಅಗ್ರಸ್ಥಾನ ಕಾಯ್ದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


