ಕ್ರಿಕೆಟ್ ನಲ್ಲಿ ಸಚಿನ್ ನನಗೆ ದೇವರ ರೀತಿ ಇದ್ದರು: ಧೋನಿ
ಕ್ರಿಕೆಟ್ ದಂತಕತೆ, ಸಚಿನ್ ತೆಂಡೂಲ್ಕರ್ ನನಗೆ ಆದರ್ಶ, ಅವರ ನಮ್ರತೆ,ಹಾಗೂ ನಡವಳಿಕೆ ಆಟದಲ್ಲಿ ಇತರ ಆಟಗಾರರಿಗೆ ಸ್ಪೂರ್ತಿ...

ನ್ಯೂಯಾರ್ಕ್: ಕ್ರಿಕೆಟ್ ದಂತಕತೆ, ಸಚಿನ್ ತೆಂಡೂಲ್ಕರ್ ನನಗೆ ಆದರ್ಶ, ಅವರ ನಮ್ರತೆ,ಹಾಗೂ ನಡವಳಿಕೆ ಆಟದಲ್ಲಿ ಇತರ ಆಟಗಾರರಿಗೆ ಸ್ಪೂರ್ತಿ ಎಂದು ಭಾರತ ಏಕದಿನ ಕ್ರಿಕೆಟ್ ಸರಣಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಡಿ ಹೊಗಳಿದ್ದಾರೆ.
ಅಮೆರಿಕಾದ ನ್ಯೂಜೆರ್ಸಿಯಲ್ಲಿ ಬಿಹಾರ ಜಾರ್ಖಂಡ್ ಅಸೋಸಿಯೇಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ನಾನು ಕ್ರಿಕೆಟ್ ಕಲಿಯುವಾಗ ಸಚಿನ್ ತೆಂಡೂಲ್ಕರ್ ಆದರ್ಶ ಪ್ರಾಯವಾಗಿದ್ದರು. ಅವರು ನನಗೆ ದೇವರಂತೆ ಇದ್ದರು. ಸತತ ಕಠಿಣ ಅಭ್ಯಾಸದಲ್ಲಿ ಸಚಿನ್ ನಂಬಿಕೆ ಇಟ್ಟಿದ್ದರು ಎಂದು ಧೋನಿ ಹೇಳಿದ್ದಾರೆ,
ಸಚಿನ್ ಸಾಧನೆಯ ಉತ್ತುಂಗದಲ್ಲಿದ್ದರು ಹಾಗೇಯೆ ಅವರು ನಮ್ರತೆಯನ್ನು ಮೈಗೂಡಿಸಿಕೊಂಡಿದ್ದರು. ಕ್ರಿಕೆಟ್ ಆಡಲು ಪ್ರತಿಭಾರಿ ಮೈದಾನಕ್ಕಿಳಿದಾಗ ತಮ್ಮ ಆಟವನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದರು ಎಂದು ಧೋನಿ ಹೊಗಳಿದ್ದಾರೆ. ಅವರ ಆಟ ಇತರ ಕ್ರಿಕೆಟ್ ಆಟಗಾರರಗಿಗೆ ಸ್ಪೂರ್ತಿಯಾಗಿತ್ತು ಎಂದು ಧೋನಿ ತಿಳಿಸಿದರು. ಶೀಘ್ರವೇ ತಾವು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರದರ್ಶನ ನೀಡುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


