ವೆಂಗ್‍ಸರ್ಕಾರ್‍ಗೆ ವಿವಾದ ಹಸ್ತಾಂತರ
ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿದ್ದ ಪಿಚ್ ಕುರಿತಂತೆ, ವಾಂಖೆಡೆಕ್ರೀಡಾಂಗಣದ ಕ್ಯುರೇಟರ್...ಸುಧೀರ್ ನಾಯಕ್

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕಾಗಿ ಸಿದ್ಧಪಡಿಸಲಾಗಿದ್ದ ಪಿಚ್ ಕುರಿತಂತೆ, ವಾಂಖೆಡೆ ಕ್ರೀಡಾಂಗಣದ ಕ್ಯುರೇಟರ್ ಸುಧೀರ್ ನಾಯಕ್ ಹಾಗೂ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ನಡುವಿನ ವಿವಾದವನ್ನು ಇತ್ಯರ್ಥಗೊಳಿಸಲು ಮಾಜಿ ಕ್ರಿಕೆಟಿಗ ಅವರಿಗೆ ಜವಾಬ್ದಾರಿ ವಹಿಸಿ, ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಆದೇಶ ಹೊರಡಿಸಿದೆ.
ಪಿಚ್ ಕುರಿತಾಗಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರೆಂದು ಸುಧೀರ್ ಇತ್ತೀಚೆಗೆ ಎಂಸಿಎಗೆ ದೂರು ಸಲ್ಲಿಸಿದ್ದರು. ಶುಕ್ರವಾರ ಸಭೆ ಸೇರಿದ್ದ ಎಂಸಿಎ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ಈ ದೂರಿನ ಬಗ್ಗೆ ಚರ್ಚಿಸಿದ ಸದಸ್ಯರು, ಈ ವಿವಾದ ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ವೆಂಗ್‍ಸರ್ಕಾರ್ ಹೆಗಲಿಗೆ ವಹಿಸಿದ್ದಾರೆ.
ಬಿಸಿಸಿಐಗೂ ದೂರು: ತಮ್ಮ ಹಾಗೂ ರವಿಶಾಸ್ತ್ರಿ ನಡುವಿನ ಜಗಳವನ್ನು ಸುಧೀರ್ ನಾಯಕ್, ಬಿಸಿಸಿಐ ಅಂಗಳಕ್ಕೂ ಕೊಂಡೊಯ್ದಿದ್ದಾರೆ. ಶಾಸ್ತ್ರಿ ವಿರುದ್ಧ ಬಿಸಿಸಿಐಗೆ ದೂರು ನೀಡಿರುವ ಅವರು, ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


