ಐಬಿಎಲ್ 2ನೇ ಆವೃತ್ತಿಗೆ ಅದ್ಧೂರಿ ಉದ್ಘಾಟನೆ
ಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ...

ಮುಂಬಯಿ: ಚೊಚ್ಚಲ ಟೂರ್ನಿಯ ನಂತರ ಎರಡು ವರ್ಷಗಳ ಅವಧಿ ನಂತರ ಮತ್ತೆ ಅಭಿಮಾನಿಗಳನ್ನು ರಂಜಿಸಲು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ ಸಂಪೂರ್ಣವಾಗಿ ಸಜ್ಜಾಗಿ ನಿಂತಿದೆ.
ಎರಡು ವರ್ಷಗಳ ಬಳಿಕ ಭಾರತೀಯ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಪುನರಾರಂಭಗೊಳ್ಳುತ್ತಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ)ನ ಅಧ್ಯಕ್ಷ ಅಖೀಲೇಶ್ ದಾಸ್ ಗುಪ್ತ ತಿಳಿಸಿದ್ದಾರೆ.
15 ದಿನಗಳ ಕಾಲ ನಡೆಯಲಿರುವ ಐಬಿಎಲ್ ಒಂದು ಮಿಲಿಯ ಡಾಲರ್ ಬಹುಮಾನ ನಿಧಿಯನ್ನು ಒಳಗೊಂಡಿದೆ. ಮುಂದಿನ ವರ್ಷದ ಜನವರಿ 2ರಿಂದ 17ರವರಗೆ ನಡೆಯಲಿರುವ ಈ ಕೂಟದಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಗುಪ್ತ ಅವರು ಐಬಿಎಲ್ ಮರಳಿರುವ ವಿಷಯವನ್ನು ಪ್ರಕಟಿಸಿದರು. ಈ ಸಂದರ್ಭ ಖ್ಯಾತ ಶಟ್ಲರ್‌ಗಳಾದ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್, ಪಿ.ವಿ. ಸಿಂಧು, ಕೋಚ್ ಗೋಪಿಚಂದ್ ಉಪಸ್ಥಿತರಿದ್ದರು. ಉದ್ಘಾಟನಾ ವರ್ಷದ ಐಬಿಎಲ್‌ಗಿಂತ ಬೃಹತ್ ಮಟ್ಟದಲ್ಲಿ ಈ ಕೂಟ ನಡೆಯುವ ಬಗ್ಗೆ ಗುಪ್ತ ಭರವಸೆ ವ್ಯಕ್ತಪಡಿಸಿದರು.
ಇಂದು ನನ್ನ ಪಾಲಿಗೆ ಹೆಮ್ಮೆಯ ದಿನವಾಗಿದೆ. ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನ ಎರಡನೇ ಆವೃತ್ತಿ ನಡೆಯುವ ದಿನವನ್ನು ಪ್ರಕಟಿಸಲು ಖುಶಿಯಾಗುತ್ತಿದೆ. ಈ ಕೂಟದ ಮೊದಲ ಕೂಟಕ್ಕಿಂತ ಭರ್ಜರಿಯಾಗಿ ಸಾಗುವ ವಿಶ್ವಾಸ ನನಗಿದೆ ಎಂದುಹೇಳಿದ ಗುಪ್ತ ತಳಮಟ್ಟದಲ್ಲಿರುವ ಯುವ ಪ್ರತಿಭೆಗಳನ್ನು ಪ್ರಚಯಿಸುವುದು ಇದರ ಉದ್ದೇಶ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


