ಬಿಸಿಸಿಐ ವಾರ್ಷಿಕ ಸಭೆ ನಂತರ ಐಪಿಎಲ್ ಹೊಸ ಪ್ರಾಂಚೈಸಿಗಳಿಗೆ ಬಿಡ್ ಪ್ರಕ್ರಿಯೆ
ಐಪಿಎಲ್ ಲೀಗ್ ಪಂದ್ಯಾವಳಿ ನಿಶ್ಚಿತವಾಗಿ ಜರುಗಲಿದ್ದು ಯಾವುದೇ ಕಾರಣಕ್ಕೂ ಪ್ರಾಂಚೈಸಿಗಳು ಗೊಂದಲಕ್ಕೆ ಒಳಾಗಾಗಬೇಕಿಲ್ಲ ಎಂದು ಐಪಿಎಲ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಮುಂಬೈ: ಮುಂದಿನ ಸಾಲಿನಲ್ಲಿ ಎಂಟು ತಂಡಗಳ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಲೀಗ್ ಪಂದ್ಯಾವಳಿ ನಿಶ್ಚಿತವಾಗಿ ಜರುಗಲಿದ್ದು ಯಾವುದೇ ಕಾರಣಕ್ಕೂ ಪ್ರಾಂಚೈಸಿಗಳು ಗೊಂದಲಕ್ಕೆ ಒಳಾಗಾಗಬೇಕಿಲ್ಲ ಎಂದು ಐಪಿಎಲ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಮತ್ತು ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಆರು ಪ್ರಾಂಚೈಸಿಗಳ ಪ್ರತಿನಿಧಿಗಳನ್ನು ಸಂಧಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ. ಆರನೇ ಐಪಿಎಲ್ ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಿಂದಾಗಿ ಸರ್ವೋಚ್ಛ ನ್ಯಾಯಾಲಯದಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಸ್ಥಾನ ರಾಯಲ್ಸ್ ಎರಡು ವರ್ಷಗಳವರೆಗೆ ಅಮಾನತುಗೊಂಡಿದ್ದು, ಇವುಗಳ ಬದಲಿಗೆ ಹೊಸ ಎರಡು ಪ್ರಾಂಚೈಸಿಗಳಿಗಾಗಿ ನವೆಂಬರ್ 9 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯ ನಂತರ ಬಿಡ್ ಕರೆಯಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಯಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


