ಸಾನಿಯಾ, ಮಾರ್ಟಿನಾ ಜೋಡಿಗೆ ಜಯ
ವಿಶ್ವ ಟೆನಿಸ್ ನ ಮಹಿಳೆಯರ ಡಬಲ್ಸ್ ನಲ್ಲಿ ಅಗ್ರ ಶ್ರೇಯಾಂಕಿತ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡಿನ ಮಾರ್ಟಿನಾ ಹಿಂಗಿಸ್...

ನವದೆಹಲಿ: ವಿಶ್ವ ಟೆನಿಸ್ ನ ಮಹಿಳೆಯರ ಡಬಲ್ಸ್ ನಲ್ಲಿ ಅಗ್ರ ಶ್ರೇಯಾಂಕಿತ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡಿನ ಮಾರ್ಟಿನಾ ಹಿಂಗಿಸ್, ಡಬ್ಲ್ಯೂಟಿಎ ಫೈನಲ್ಸ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದ 4ನೇ ಸುತ್ತಿನ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.
ಸೋಮವಾರ ನಡೆದ ರೌಂಡ್ ರಾಬಿನ್ ಪಂದ್ಯದಲ್ಲಿ ಸಾನಿಯಾ- ಮಾರ್ಟಿನಾ, ಅಮೆರಿಕದ ಜೋಡಿಯಾದ ರಾಕ್ವೆಲ್ ಕೋಪ್ಸ್ ಜೋನ್ಸ್ ಮತ್ತು ಎಬಿಗೇಲ್ ಸ್ವಿಯರ್ಸ್ ವಿರುದ್ಧ 6-4, 6-2 ನೇರ ಸೆಟ್‍ಗಳಲ್ಲಿ ಜಯ ಸಾಧಿಸಿದರು.
ಪ್ರಾಂಜಲಾ ಫೈನಲ್ ಗೆ: ಸೋಮವಾರ ನಡೆದ ಮತ್ತೊಂದು ಮಹತ್ವದ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಆಟಗಾರ್ತಿ ಪ್ರಾಂಜಲಾ ಯಡ್ಲಪಳ್ಳಿ, ಟೂರ್ನಿಯ 16 ವರ್ಷ ವರ್ಷದೊಳಗಿನವರ ವಿಭಾಗದ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ. ಕೊರಿಯಾದ ಹೇ ರ್ಯಾನ್ ಯುನ್ ವಿರುದ್ಧ ಸೆಣಸಿದ ಅವರು, 6-2, 6-2 ನೇರ ಸೆಟ್‍ಗಳ ಜಯ ಸಂಪಾದಿಸಿದರು.
ಮುಗುರುಜಾ, ಕೆರ್ಬರ್ ಮುಂದಡಿ ಮಹಿಳೆಯರ ಸಿಂಗಲ್ಸ್ ವಿಭಾಗದ 3ನೇ ಸುತ್ತಿನ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿ ಸಫಾರೋವಾ ವಿರುದ್ಧ ಸೆಣಸಿದ ಮುಗುರುಜಾ
6-3, 7-6 (4) ಸೆಟ್‍ಗಳಲ್ಲಿ ಜಯ ಗಳಿಸಿದರೆ, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೊವಾ ವಿರುದ್ಧ ಮುಖಾಮುಖಿಯಾಗಿದ್ದ ಜರ್ಮನಿಯ ಏಂಜಲಿಕ್ ಕೆರ್ಬರ್ 6-2, 6-6 (3) ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


