ಕ್ರೀಡೆ

ಕರ್ನಾಟಕಕ್ಕೆ 373 ರನ್ ಗಳ ಭಾರೀ ಸವಾಲು

ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗೆ 262 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಪ್ರವಾಸಿ ಹರ್ಯಾಣ ತಂಡ, ಹಾಲಿ ಚಾಂಪಿಯನ್ ಕರ್ನಾಟಕದ ಗೆಲುವಿಗೆ 373 ರನ್ ಗಳ ಸವಾಲು ನೀಡಿದೆ.

ಕರ್ನಾಟಕಕ್ಕೆ 373 ರನ್ ಗಳ ಭಾರೀ ಸವಾಲು
ಕರ್ನಾಟಕ-ಹರ್ಯಾಣ ರಣಜಿ ಪಂದ್ಯ(ಸಂಗ್ರಹ ಚಿತ್ರ)
Published On :

ಮೈಸೂರು: ಮೊದಲ ಇನ್ನಿಂಗ್ಸ್ ನಲ್ಲಿ ಸಿಕ್ಕ 110  ರನ್ ಗಳ ಅಮೋಘ ಮುನ್ನಡೆಯ ಜತೆಗೆ ಎರಡನೇ ಇನ್ನಿಂಗ್ಸ್ ನಲ್ಲಿ 9 ವಿಕೆಟ್ ಗೆ 262 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡ ಪ್ರವಾಸಿ ಹರ್ಯಾಣ ತಂಡ, ಹಾಲಿ ಚಾಂಪಿಯನ್ ಕರ್ನಾಟಕದ ಗೆಲುವಿಗೆ 373 ರನ್ ಗಳ ಸವಾಲು ನೀಡಿದ್ದು, ವಿನಯ್ ಪಡೆ ಗೆಲುವಿನ ಕನಸು ಕಾಣುತ್ತಿದೆ.
ಇಲ್ಲಿನ ಗಂಗೋತ್ರಿ, ಗ್ಲೇಡ್ಸ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಎ ಗುಂಪಿನ ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ ಆತಿಥೇಯ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿ 6 ಓವರ್ ಗಳಲ್ಲಿ 9 ರ ಗಳಿಸಿತ್ತು. ಆರಂಭಿಕ ರಾಬಿನ್ ಉತ್ತಪ್ಪ ಇದೇ ಮೊದಲ ಬಾರಿಗೆ ಎದುರಿಸಿದ 25 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ 11 ಎಸೆತಗಳಲ್ಲಿ 1 ಬೌಂಡರಿ ಸೇರಿದ 9 ರನ್ ಮಾಡಿದ ಕೆ.ಎಲ್ ರಾಹುಲ್ ಜತೆಗೆ ನಾಲ್ಕನೇ ಹಾಗೂ ಅಂತಿಮ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದರು. ಭಾನುವಾರ ಆಟದ ಕೊನೆ ದಿನವಾಗಿದ್ದು, ಕರ್ನಾಟಕದ ಮುಂದೆ ಭಾರಿ ಸವಾಲೇ ಇದೆ.
ಯಾವುದೇ ಕಾರಣಕ್ಕೂ ಹರ್ಯಾಣ ಬೌಲರ್ ಗಳ ಕೈ ಮೇಲಾಗದಂತೆ ನೋಡಿಕೊಳ್ಳಬೇಕಾದ ಒತ್ತಡಕ್ಕೂ ಒಳಗಾಗಿದೆ. ಏಕೆಂದರೆ ಕಳೆದ ಮೂರು ದಿನಗಳಲ್ಲಿ 27 ವಿಕೆಟ್ ಉರುಳಿದ್ದು, ಈ ದಿಸೆಯಲ್ಲಿ ಜೋನೆಯ ದಿನದಾಟ ಕೌತುಕ ಕೆರಳಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 221 ರನ್ ಗಳಿಗೆ ಸರ್ವಪತನ ಕಂಡಿರುವ ಕರ್ನಾಟಕ, ಕನಿಷ್ಟ ಪಂದ್ಯವನ್ನು ಗೆಲ್ಲದೆ ಹೋದರೂ, ಸೋಲು ತಪ್ಪಿಸಿಕೊಳ್ಳಸೋಸುಗವಾದರೂ, ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿರುವ ಅದು, ಪಂದ್ಯವನ್ನು ಡ್ರಾ ಮಾಡಿಕೊಂಡರೆ ಕೇವಲ ಒಂದು ಅಂಕವನ್ನಷ್ಟೇ ಪಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.