ಕ್ರೀಡೆ

ಲಂಕಾ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಬೌಲಿಂಗ್‌ಗೆ ಹೆದರುತ್ತಿದ್ದೆ: ಸೆಹ್ವಾಗ್

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ನನ್ನ ಸ್ಫೋಟಕದ ಬ್ಯಾಟಿಂಗ್ ನಡುವೆಯೂ...

ಲಂಕಾ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಬೌಲಿಂಗ್‌ಗೆ ಹೆದರುತ್ತಿದ್ದೆ: ಸೆಹ್ವಾಗ್
ವೀರೇಂದ್ರ ಸೆಹ್ವಾಗ್, ಮುತ್ತಯ್ಯ ಮುರಳೀಧರನ್
Published On :

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ನನ್ನ ಸ್ಫೋಟಕದ ಬ್ಯಾಟಿಂಗ್ ನಡುವೆಯೂ ನಾನು ಹೆದರಿದ್ದು ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಅವರ ಬೌಲಿಂಗ್‌ಗೆ ಎಂದು ಹೇಳಿದ್ದಾರೆ.

ಚೆಂಡನ್ನು ನೋಡು, ಚೆಂಡನ್ನು ಹೊಡೆ ಎಂಬ ಸರಳ ಸಿದ್ದಾಂತವನ್ನು ನಂಬಿಕೊಂಡಿದ್ದ ಸೆಹ್ವಾಗ್ ತಮ್ಮ ಆಟದಲ್ಲೂ ಅದನ್ನು ತೋರಿಸುತ್ತಿದ್ದರು. ಆದರೆ ಮುರಳೀಧರನ್ ಅವರ ಬೌಲಿಂಗ್ ಗೆ ಮಾತ್ರ ಅಂಜುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದಲ್ಲಿ ಆಡಲು ನಾನು ಅದೃಷ್ಟ ಮಾಡಿದ್ದೆ. ಕ್ರಿಕೆಟ್ ದಿಗ್ಗಜರು, ಮಹಾನ್ ನಾಯಕರ ಜೊತೆ ಆಡಿದ ಅನುಭವವನ್ನು ವರ್ಣಿಸಲಾರೆ. ಅವರೆಲ್ಲರಿಗೂ ನಾನು ಅಭಾರಿ. ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಹೀರ್ ಖಾನ್‍ರ ಜೊತೆ ಆಡುವ ಅದೃಷ್ಟ ನನಗೆ ಸಿಕ್ಕಿತ್ತು. ನಾನು ಕ್ರಿಕೆಟ್ ಆಟದಿಂದ ನಿವೃತ್ತನಾದರೂ ಕ್ರಿಕೆಟ್‍ನಿಂದ ನಿವೃತ್ತನಾಗಿಲ್ಲ. ಕಾಮೆಂಟರಿ ಅಥವಾ ಕೋಚ್ ಆಗಿಯೂ ಕ್ರಿಕೆಟ್ ಫೀಲ್ಡ್ ನಲ್ಲಿ ಇರಲಿದ್ದೇನೆ ಎಂದು ತಮ್ಮ ಭವಿಷ್ಯದ ಬಗ್ಗೆ ಹೇಳಿದರು.

ನಾನು ಕ್ರಿಕೆಟ್‍ನಲ್ಲಿ ಮೇಲೆ ಬರಲು ಕಾರಣ ಸೌರವ್ ಗಂಗೂಲಿ. ಗಂಗೂಲಿ ಮೊದಲ ಕ್ರಮಾಂಕವನ್ನು ನನಗೆ ತ್ಯಾಗ ಮಾಡಿದ ಬಿಟ್ಟು ಕೊಟ್ಟಿದ್ದರು. ನನ್ನಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿದ್ದರು ಎಂದು ಹೇಳುವ ಮೂಲಕ ಸೆಹ್ವಾಗ್ ಗಂಗೂಲಿ ಅವರನ್ನು ಹೊಗಳಿದರು.

ನನ್ನು ಕುಟುಂಬ, ಅಭಿಮಾನಿಗಳು ನನಗೆ ಸದಾ ಸ್ಫೂರ್ತಿ ತುಂಬುತ್ತಿದ್ದರು. ನ್ನ ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಕೋಚ್ ಎ.ಎನ್ ಶರ್ಮಾ ಸರ್ ಅವರಿಗೆ ನನ್ನ ನಮನಗಳು ಎಂದು ಎರಡು ಪುಟಗಳ ಪತ್ರವನ್ನು ಪ್ರಕಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.