ಕ್ರೀಡೆ

ಐಎಸ್ ಎಲ್ ಲೀಗ್; ಕೋಲ್ಕತಾ ಮಣಿಸಿದ ಪುಣೆ

ಪಂದ್ಯ ಶುರುವಾದ ಎರಡನೇ ನಿಮಿಷದಲ್ಲಿ ಜಾಕಿಚಾಂದ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್..

ಐಎಸ್ ಎಲ್ ಲೀಗ್; ಕೋಲ್ಕತಾ ಮಣಿಸಿದ ಪುಣೆ
ಸಾಂದರ್ಭಿಕ ಚಿತ್ರ
Published On :

ಪುಣೆ: ಪಂದ್ಯ ಶುರುವಾದ ಎರಡನೇ ನಿಮಿಷದಲ್ಲಿ ಜಾಕಿಚಾಂದ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯ 14ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು 1-0 ಗೋಲಿನಿಂದ ಪುಣೆ ಎಫ್ ಸಿ ಮಣಿಸಿತು.

ಇಲ್ಲಿನ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಪುಣೆ ಎಫ್ ಸಿ ಆಟಗಾರರು, ಮೊದಲ ಹಂತದಲ್ಲಿಯೇ ಸಿಕ್ಕ ಗೋಲಿನಿಂದ ಪಂದ್ಯದಾದ್ಯಂತ ಹಿಡಿತ ಸಾಧಿಸಿದರು. ಈ ಗೆಲುವಿನಿಂದಾಗಿ ಪುಣೆ ಎಫ್ ಸಿ ಅಂಕಪಟ್ಟಿಯಲ್ಲಿ ಒಟ್ಟು 9 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದರೆ, ಆಘಾತಕಾರಿ ಸೋಲಿನಿಂದಾಗಿ ಕೋಲ್ಕತಾ ತಂಡ 2ನೇ ಸ್ಥಾನಕ್ಕೆ ಕುಸಿಯಿತು. ಭಾನುವಾರ ಕೊಚ್ಚಿಯಲ್ಲಿ ಡೆಲ್ಲಿ-ಕೇರಳ ತಂಡಗಳು ಸೆಣಸಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.