ಮೆಂಡೋಜಾ ಮಿಂಚು: ಗೆದ್ದ ಚೆನ್ನೈ
ಪ್ರವಾಸಿ ಚೆನ್ನೈ ಯಿನ್ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ 2 -0 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಜಯದೊಂದಿಗೆ ಚೆನ್ನೈ ಯಿನ್ ಪಡೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೇರಿದೆ.

ಮುಂಬೈ: ಪಂದ್ಯದ ದ್ವಿತೀಯಾರ್ಧದಲ್ಲಿ ಸ್ಪೈಕರ್ ಜಾನ್ ಸ್ಟೀವನ್ ಮೆಂಡೋಜಾವ್ಯಾಲೆನ್ಸಿಯಾ ದಾಖಲಿಸಿದ ಎರಡು ಆಕರ್ಷಕ ಗೋಳಿನ ನೆರವಿನಿಂದ ಪ್ರವಾಸಿ ಚೆನ್ನೈ ಯಿನ್ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ 2 -0 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದೆ. ಈ ಜಯದೊಂದಿಗೆ ಚೆನ್ನೈ ಯಿನ್ ಪಡೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೇರಿದೆ.
ಮಿಜಲ್ಯೀ ತಂಡದ ಪರ ಮೆಂಡೋಜಾ 60 ಮತ್ತು 66 ನೇ ನಿಮಿಷದಲ್ಲಿ ಒಂದರ ಹಿಂದೊಂದರಂತೆ ಎರಡು ಗೋಲು ಭಾರಿಸಿದರು. ಆರಂಭಿಕ ಎರಡು ಪಂದ್ಯಗಳಲ್ಲಿ ಒಂದು ಡ್ರಾ ಹಾಗೂ ಸೋಲು ಕಂಡಿದ್ದ ಮುಂಬೈ ಸಿಟಿ ಎಫ್ ಸಿ ಈ ಪಂದ್ಯದಲ್ಲಿ ಗೆದ್ದು ವಿಜಯದ ಹಾಡಿಗೆ ಮರಳಲು ತಂಡದಲ್ಲಿ 6 ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿತು. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಿಗಾಗಿ ಆರಂಭಿಕ ಪಂದ್ಯಗಳಿಗೆ ಅಳಭ್ಯರಾಗಿದ್ದ ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಸೇರಿದಂತೆ ಸುಬ್ರತಾ ಪಾಲ್, ಅಶುತೋಷ್ ಮೆಹ್ತಾ, ಲಾಲ್ಚುಮಾವಿಯಾ ಫನಾಯ್ ಸೇಲಿಂ ಬೆನಾಚೌರ್, ಫೆಡರಿಕ್ ಪಿಕ್ವಿಯಾನ್ ತಂಡಕ್ಕೆ ಸೇರ್ಪಡೆಯಾಗಿದ್ದರು.
ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ಪ್ರಬಲ ಪೈಪೋಟಿ ನಡೆಸಿದ ಹಿನ್ನೆಲೆಯಲ್ಲಿ ಮೊದಲಾರ್ಧದ ಮುಕ್ತಾಯಕ್ಕೆ ಗೋಲು ರಹಿತ ಸಮಬಲ ಸಾಧಿಸಲಾಗಿತ್ತು. ಆದರೆ ದ್ವಿತೀಯಾರ್ಧದಲ್ಲಿ ಮೆಂಡೋಜಾ ಎರಡು ಆಕರ್ಷಕ ಗೋಲು ದಾಖಲಿಸಿ ತಂಡವನ್ನು ಜಯದತ್ತ ನಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


