ಕ್ರೀಡೆ

ಸಾಕಿನ್ನು, ನನ್ನದು ಸುಂದರ ಪಯಣ

ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್‍ಗಳಲ್ಲಿ ಒಬ್ಬರೆನಿಸಿದ್ದ ಎಡಗೈ ವೇಗಿ ಜಹೀರ್ ಖಾನ್ ಗುರುವಾರ ಎಲ್ಲ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ...

ಸಾಕಿನ್ನು, ನನ್ನದು ಸುಂದರ ಪಯಣ
ಜಹೀರ್ ಖಾನ್
Published On :
ಮುಂಬೆ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ವೇಗದ ಬೌಲರ್‍ಗಳಲ್ಲಿ ಒಬ್ಬರೆನಿಸಿದ್ದ ಎಡಗೈ ವೇಗಿ ಜಹೀರ್ ಖಾನ್ ಗುರುವಾರ ಎಲ್ಲ ಬಗೆಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. 
37 ವರ್ಷದ ಜಹೀರ್ ಖಾನ್ ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಗಾಯದ ಸೆಳವಿಗೆ ಸಿಲುಕಿ ಜರ್ಜರಿತರಾಗಿದ್ದರಲ್ಲದೆ, ತಮ್ಮ ಬೌಲಿಂಗ್‍ನಲ್ಲಿ ಮೊದಲಿನ ಮೊನಚು ಕಳೆದುಕೊಂಡಿದ್ದರು. ಭಾರತದ ಪರ 92 ಟೆಸ್ಟ್ , 200 ಏಕದಿನ ಹಾಗೂ 17 ಚುಟುಕು ಪಂದ್ಯಗಳಿಂದ ಒಟ್ಟಾರೆ 610 ವಿಕೆಟ್ ಪಡೆದಿರುವ ಅವರು, ಮುಂದಿನ ವರ್ಷ ನಡೆಯಲಿರುವ 9ನೇ ಐಪಿಎಲ್ ಪಂದ್ಯಾವಳಿಯೊಂದಿಗೆ ಸಕ್ರಿಯ ಕ್ರಿಕೆಟ್‍ಗೆ ಸಂಪೂರ್ಣ ವಿದಾಯ ಹೇಳುವುದಾಗಿ ಮುಂತಿಳಿಸಿದ್ದಾರೆ.
ಮುಂದಿನ ಕ್ರಿಕೆಟ್ ಋತುವಿಗಾಗಿ ತರ ಬೇತಿ ಕೈಗೊಳ್ಳಬೇಕಾದ ಸಂದರ್ಭದಲ್ಲಿ ದಿನವೊಂದಕ್ಕೆ 18 ಓವರ್‍ಗಳ ಬೌಲಿಂಗ್‍ಗೆ ನನ್ನ ಭುಜ ಸ್ಪಂದಿಸುತ್ತಿಲ್ಲ ಎಂಬುದು ವೇದ್ಯವಾಗಿದೆ. ಇದು ನನ್ನ ನಿವೃತ್ತಿಗೆ ಸಕಾಲವೆಂದೇ ತಿಳಿದಿದ್ದೇನೆ. ಈ ಸಂಗತಿ ಮನವರಿಕೆಯಾಗುತ್ತಲೇ ತತಕ್ಷಣದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಲು ನಿರ್ಧರಿಸಿದೆ. 
ಮುಂದಿನ ಐಪಿಎಲ್ 9ನೇ ಆವೃತ್ತಿಯು ದೇಶೀಯ ಕ್ರಿಕೆಟ್‍ನ ನನ್ನ ಕೊನೇ ನಂಟು. ಇದರೊಂದಿಗೆ ನನ್ನೆಲ್ಲಾ ಕ್ರಿಕೆಟ್ ಬದುಕು ಅಸ್ತಮಿಸಲಿದೆ. ಹೆಚ್ಚೂ ಕಮ್ಮಿ ಅಖಂಡ ಎರಡು ದಶಕಗಳ ವೃತ್ತಿಪರ ಬದುಕಿನಲ್ಲಿ ಕ್ರಿಕೆಟ್ ನನ್ನ ಏಕಮಾತ್ರ ಬದುಕಾಗಿತ್ತು. ಇದು ನನಗೆ ಚೆನ್ನಾಗಿಯೇ ಗೊತ್ತಿದೆ. ಕ್ರಿಕೆಟ್ ವೈಯಕ್ತಿಕವಾಗಿ ನಾನೇನು ಎಂಬುದನ್ನು ತಿಳಿಸಿಕೊಟ್ಟಿದೆ. ಬದುಕಿನಲ್ಲಿ ನಾನು ಬಯಸಿದ್ದಕ್ಕಿಂತ ಹೆಚ್ಚಿನದನ್ನು ಇದು ನನಗೆ ನೀಡಿದೆ. ಒಂದು ಸುಂದರ ಹಾಗೂ ಮನಮೋಹಕ ನೆನಪುಗಳೊಂದಿಗೆ ಕ್ರಿಕೆಟ್‍ನಿಂದ ದೂರ ಸರಿಯುತ್ತಿದ್ದೇನೆ. ಜೀವನವೆಂಬುದು ಅನುಭವ ಹಾಗೂ ಮಹಾನ್ ಗೆಳೆತನದೊಂದಿಗೆ ಸದಾ ನವೀಕರಿಸಲ್ಪಡುತ್ತದೆ. ನನ್ನ ಹಡೆದವ್ವ ನನ್ನೀ ನಿವೃತ್ತಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನನ್ನ ವೃತ್ತಿಬದುಕಿನ ಬಹುದೊಡ್ಡ ಹಾಗೂ ಮರೆಯದ ಕ್ಷಣವೆಂದರೆ 2011ರ ಐಸಿಸಿ ವಿಶ್ವಕಪ್ ಕ್ರಿಕೆಟ್. 
ಈ ಪಂದ್ಯಾವಳಿಯಲ್ಲಿ ನಂ.1 ಏಕದಿನ ತಂಡವಾಗಿ ಭಾಗವಹಿಸಿ ಅದಕ್ಕೆ ತಕ್ಕಂತೆ ಟ್ರೋಫಿಯನ್ನು ಎತ್ತಿ ಹಿಡಿದಂತಾದುದು ಆ ಮೂಲಕ ವಿಜೇತ ತಂಡದ ಪರ 21 ವಿಕೆಟ್ಗಳನ್ನು ಪಡೆದ ರೋಚಕ ಕ್ಷಣಗಳು ಎಂದಿಗೂ ರೋಮಾಂಚಕವೇ. ಪ್ರತೀ ಬಾರಿಯೂ ತಂಡಕ್ಕೆ ಹಿಂದಿರುಗುವಾಗ ಜಾಕ್ ಈಸ್ ಬ್ಯಾಕ್' ಎಂಬ ಶಿರೋನಾಮೆಯು ನಾನು ಕ್ರಿಕೆಟ್‍ಗೆ ನನ್ನೆಲ್ಲವನ್ನೂ ನೀಡುವುದರ ದ್ಯೋತಕದಂತೆನಿಸಿತ್ತು. ಮತ್ತು ನಮ್ಮೀ ಸುಂದರ ದೇಶ ಶ್ರೀರಾಂಪುರ (ಮಹಾರಾಷ್ಟ್ರದ ಒಂದು ಕುಗ್ರಾಮ)ದ ಬಾಲಕನೋರ್ವ ತಾನು ಕಂಡ ಕನಸನ್ನು ಬೆನ್ನಟ್ಟಲು ಹಾಗೂ ಅದರಲ್ಲಿ ಜೀವಿಸಲು ಕೊಟ್ಟ ಅವಕಾಶವನ್ನು ಎಂದೆಂದಿಗೂ ಮರೆಯಲಾಗದು. ಎಂಜಿನಿಯರಿಂಗ್ ವೃತ್ತಿಗೆ ಬದಲು ಕ್ರಿಕೆಟ್ ಅನ್ನು ಆರಿಸಿಕೊಂಡಾಗ ನನ್ನ ಅಪ್ಪಅಮ್ಮ ಬೆನ್ನಿಗೆ ನಿಂತರು. ಎಂಜಿನಿಯರ್ಸ್ ತೋ ಬಹುತ್ ಸಾರೇ ಹೇ ತು ಬೌಲರ್ ಹೈ ಬನಾ (ಎಂಜಿನಿಯರ್ ಗಳು ಸಾಕಷ್ಟು ಇದ್ದಾರೆ, ನೀನು ಬೌಲರ್ ಆಗು) ಎಂದು ಆ ಸಂದರ್ಭದಲ್ಲಿ ನನ್ನಪ್ಪ ಹೇಳಿದ ಮಾತು ಈಗಲೂ ನೆನಪಿನಲ್ಲಿದೆ.
ಹೆಜ್ಜೆ ಗುರುತು
ಪಂದ್ಯ 309, ಇನ್ನಿಂಗ್ಸ್ 379, ವಿಕೆಟ್ 610, ಸರಾಸರಿ 31.14, ಬೆಸ್ಟ್ 87/7,
ವೇಗದ ಬೌಲರ್‍ಗಳಲ್ಲಿ ನಾನು ಕಂಡ ಅತ್ಯಂತ ಕೂಲ್ ಬೌಲರ್ ಜಹೀರ್ ಖಾನ್ ಪ್ರತಿ ಬಾರಿಯೂ ಜಾಣ್ಮೆಯಿಂದಲೇ ಬೌಲ್ ಮಾಡುತ್ತಿದ್ದರು. 
- ಸಚಿನ್ ತೆಂಡೂಲ್ಕರ್
2002ರಿಂದ ನಾನು ಇಷ್ಟಪಡುತ್ತಿದ್ದ ಬೌಲರ್ ಜಹೀರ್ ಖಾನ್. ಈ ಸಂದರ್ಭದಲ್ಲಿ ನಾನು ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಮಾ್ಯನೇಜರ್ ಆಗಿದ್ದೆ. 
- ರಾಜೀವ್ ಶುಕ್ಲಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.