ಕ್ರೀಡೆ

ಇಂದೋರ್ ಡ್ರೆಸ್ಸಿಂಗ್ ರೂಂ ಗೆ ರಾಹುಲ್ ದ್ರಾವಿಡ್ ಹೆಸರು

ಇಂದೋರ್ ನ ಹೋಳ್ಕರ್ ಮೈದಾನದ ತವರು ತಂಡದ ಡ್ರೆಸ್ಸಿಂಗ್ ರೂಮ್‌ಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹೆಸರನ್ನಿಡಲಾಗಿದೆ....

ಇಂದೋರ್ ಡ್ರೆಸ್ಸಿಂಗ್ ರೂಂ ಗೆ ರಾಹುಲ್ ದ್ರಾವಿಡ್ ಹೆಸರು
ರಾಹುಲ್ ದ್ರಾವಿಡ್ ಡ್ರೆಸ್ಸಿಂಗ್ ರೂಮ್
Published On :

ಇಂದೋರ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ 2ನೇ ಏಕದಿನ ಪಂದ್ಯ ನಡೆಯಲಿರುವ  ಇಂದೋರ್ ನ ಹೋಳ್ಕರ್ ಮೈದಾನದ ತವರು ತಂಡದ ಡ್ರೆಸ್ಸಿಂಗ್ ರೂಮ್‌ಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಹೆಸರನ್ನಿಡಲಾಗಿದೆ.

1973ರ ಜ.11ರಂದು ಇಂದೋರ್‌ನಲ್ಲಿ ಜನಿಸಿದ್ದ ದ್ರಾವಿಡ್, 2006ರಲ್ಲಿ ಈ ಕ್ರೀಡಾಂಗಣದಲ್ಲಿ ನಡೆದ ಮೊಟ್ಟ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನೇತೃತ್ವ ವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ನಡೆದಿದ್ದ ಆ ಪಂದ್ಯದಲ್ಲಿ ದ್ರಾವಿಡ್ ಅವರ 69 ರನ್‌ಗಳ ನೆರವನಿಂದ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿತ್ತು.

ಅದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಕರ್ನಾಟಕದವರೇ ಆದ ರಾಬಿನ್ ಉತ್ತಪ್ಪ 86 ರನ್ ಗಳಿಸಿದ್ದರು. ಇನ್ನು ಡ್ರೆಸ್ಸಿಂಗ್ ರೂಂ ಗೆ ರಾಹುಲ್ ಹೆಸರು ಇಟ್ಟಿರುವುದಕ್ಕೆ ಟೀಂ ಇಂಡಿಯಾ ಆಟಗಾರರ ಅದೃಷ್ಟ ಬದಲಾಗಬಹುದೆಂದು ಕ್ರಿಕೆಟ್ ಅಭಿಮಾನಿಗಳು ಆಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.