ವಿಜೇಂದರ್‍ಗೆ ಸ್ಮರಣೀಯ ಜಯ
ಭಾರತೀಯ ಬಾಕ್ಸಿಂಗ್ ಅಭಿಮಾನಿಗಳ ಪಾಲಿಗೆ ಇದೊಂದು ಚರಿತ್ರಾರ್ಹ ಸಾಧನೆಯೇ ಎನಿಸ ಬಹುದು... ಆದರೆ, ಬಾಕ್ಸರ್ ವಿಜೇಂದರ್ ಸಿಂಗ್...

Published On :
ಮ್ಯಾಂಚೆಸ್ಟರ್ : ಭಾರತೀಯ ಬಾಕ್ಸಿಂಗ್ ಅಭಿಮಾನಿಗಳ ಪಾಲಿಗೆ ಇದೊಂದು ಚರಿತ್ರಾರ್ಹ ಸಾಧನೆಯೇ ಎನಿಸ ಬಹುದು... ಆದರೆ, ಬಾಕ್ಸರ್ ವಿಜೇಂದರ್ ಸಿಂಗ್ ಪಾಲಿಗಂತೂ ಅಕ್ಷರಶಃ ಆನಂದಭಾಷ್ಪ ಜಿನುಗುವ ಸಮಯ. ಹೌದು. ತೀವ್ರ ಕುತೂಹಲ ಕೆರಳಿಸಿದ್ದ, ಬ್ರಿಟನ್‍ನ ಬಾಕ್ಸರ್ ಸೋನಿ ವೈಟಿಂಗ್ ವಿರುದ್ಧ ತಮ್ಮ ಮೊಟ್ಟಮೊದಲ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇಂದರ್ ಸಿಂಗ್ ಗೆಲವು ಸಾಧಿಸಿದ್ದಾರೆ. ಈ ಮೂಲಕ, ಹೊಸತೊಂದು ಚರಿತ್ರೆಯನ್ನು ನಿರ್ಮಿಸಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ ನಾಲ್ಕು ಸುತ್ತುಗಳ ಈ ಮಿಡಲ್‍ವೇಟ್ ಫೋರ ಪಂದ್ಯದಲ್ಲಿ, ವಿಜೇಂದರ್ ಸಿಂಗ್, ಸೋನಿ ವೈಟಿಂಗ್ ವಿರುದ್ದದ ಮೂರು ಸುತ್ತಿನ ಮುಖಾಮುಖಿಯಲ್ಲಿ ಜಯ ಸಾಧಿಸಿ, `ವಿಜೇಂದರ್‍ಗೆ ಮೊದಲ ಪಂದ್ಯದಲ್ಲಿ ನರಕ ತೋರಿಸುತ್ತೇನೆ' ಎಂದಿದ್ದ ವೈಟಿಂಗ್‍ರವರ ಸೊಕ್ಕು ಮುರಿದರು. ಅಲ್ಲದೆ, ಹವ್ಯಾಸಿ ಬಾಕ್ಸಿಂಗ್‍ನಿಂದ ವೃತ್ತಿಪರ ಬಾಕ್ಸಿಂಗ್‍ಗೆ ಬಂದಾಗ ಎದುರಿಸಿದ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು. ಹಸಿರು ಹಾಗೂ ಬಿಳಿ ಬಣ್ಣದ ಶಾರ್ಟ್‍ನೊಂದಿಗೆ ವಿಜೇಂದರ್ ಬಾಕ್ಸಿಂಗ್ ಅಂಗಣಕ್ಕೆ ಬಂದಾಗ ಪಂಜಾಬಿ ಹಾಡನ್ನು ಮೊಳಗಿಸಲಾಯಿತು. ಪಂದ್ಯದ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ವಿಜೇಂದರ್ ಸಿಂಗ್ ಗೆಲವು ದಾಖಲಿಸಿದರು. ಆದರೆ, 2ನೇ ಸುತ್ತು ಅಷ್ಟು ಸುಲಭವಾಗಿರಲಿಲ್ಲ. ಆ ಸುತ್ತಿನಲ್ಲಿ ವಿಜೇಂದರ್ ಕೆಲವಾರು ಭಾರಿ ಹೊಡೆತಗಳನ್ನು ಎದುರಾಳಿಯಿಂದ ಪಡೆದರು. ಆದರೂ, ಧೃತಿಗೆಡದ ಅವರು, ಸತತವಾಗಿ ಆರು ಪಂಚ್‍ಗಳನ್ನು ವೈಟರ್‍ಗೆ ನೀಡಿ ಅವರನ್ನು ಬೆಚ್ಚಿಬೀಳುವಂತೆ ಮಾಡಿದರು. ಇದರಿಂದ ಕೊಂಚ ಧೃತಿಗೆಟ್ಟ ವೈಟರ್, ಈ ಸುತ್ತಿನಲ್ಲಿ ವಿಜಿಗೆ ಶರಣಾದರು.ಆನಂತರ, ಮೂರನೇ ಸುತ್ತಿನಲ್ಲೂ ಮಿಂಚಿದ ವಿಜಿ, ಎದುರಾಳಿಗೆ ತೀವ್ರ ಪೆಟ್ಟುಗಳನ್ನು ಕೊಟ್ಟರು. ಇದರಿಂದ, ಅಕ್ಷರಶಃ ಸುಸ್ತಾದ ವೈಟರ್, ಆಟ ನಡೆಯುತ್ತಿದ್ದಾಗಲೇ, ವೈಟರ್ ಭಾರಿ ನಿತ್ರಾಣದರು. ಇದನ್ನ ಗಮನಿಸಿದ ಪಂದ್ಯದ ರೆಫರಿ, ಪಂದ್ಯ ನಿಲ್ಲಿಸಿ, ವಿಜೇಂದರ್ ಅವರನ್ನು ವಿಜಯಿಯೆಂದು ಘೋಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


