ಧೋನಿಯನ್ನೂ ಒಬ್ಬ ಆಟಗಾರನನ್ನಾಗಿ ಪರಿಶೀಲಿಸಬೇಕು: ಅಜಿತ್ ಅಗರ್ಕರ್
ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಆಟಗಾರನಾಗಿಯೂ ಪರಿಶೀಲಿಸಬೇಕೆಂದು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ.....

ಮುಂಬಯಿ: ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ಆಟಗಾರನಾಗಿಯೂ ಪರಿಶೀಲಿಸಬೇಕೆಂದು ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಆಯ್ಕೆದಾರರಿಗೆ ಕರೆ ನೀಡಿದ್ದಾರೆ. ಧೋನಿಗೆ ಹೋಲಿಕೆಯಾಗಿ ಟೆಸ್ಟ್ ನಾಯಕರಾಗಿ ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಗಮನಿಸುವಂತೆಯೂ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕಿರು ಓವರುಗಳಲ್ಲಿ ಧೋನಿಯ ಪಾತ್ರವನ್ನು ಪರಿಶೀಲಿಸುವಂತೆಯೂ ಸಲಹೆ ನೀಡಿದರು.
ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಸರಣಿಯನ್ನು 0-2ರಿಂದ ಸೋತಿದ್ದು, ಮೂರನೇ ಪಂದ್ಯ ಮಳೆಯಿಂದ ವಾಷ್ ಔಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಧೋನಿಯ ಪ್ರದರ್ಶನವನ್ನು ವಿಶ್ಲೇಷಿಸಿದ ಅವರು ಧೋನಿ ಭಾರತದ ಉತ್ತಮ ಆಟಗಾರನಾಗಿದ್ದರೂ, ತಂಡಕ್ಕೆ ಭಾರವಾಗಿ ಪರಿಣಮಿಸುವುದು ಬೇಕಾಗಿಲ್ಲ. ಅವರು ಈಗ ನೀಡುತ್ತಿರುವ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಅವರು ಹಲವು ವರ್ಷಗಳಿಂದ ಉತ್ತಮ ಸಾಧನೆ ತೋರಿದ್ದಾರೆಂದರೆ, ಈಗ ವಿಫಲವಾಗುವುದು ಸರಿಯೆನಿಸುವುದಿಲ್ಲ. ಧೋನಿ ನಾಯಕರಾಗಿ ಮಾತ್ರವಲ್ಲ ಆಟಗಾರರಾಗಿ ಹೇಗೆ ಆಡುತ್ತಿದ್ದಾರೆಂದು ಆಯ್ಕೆದಾರರು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅಗರ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಏಕ ದಿನ ಅಂತಾರಾಷ್ಟ್ರೀಯ ಐದು ಪಂದ್ಯಗಳ ಸರಣಿಗೆ ಮುನ್ನ, ಭಾರತದ ತಂಡವು ಉಮೇಶ್ ಯಾದವ್ ಅವರ ನೈಜ ಪೇಸ್ ಬೌಲಿಂಗ್‌ನಿಂದ ಚೇತರಿಸಿಕೊಳ್ಳಲಿದೆ ಎಂದು ಹೇಳಿದರು. ಧೋನಿ ಏಕ ದಿನ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಆಡುವುದನ್ನು ಅಗರ್ಕರ್ ಟೀಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


