ಕ್ರೀಡೆ

ಕಿವೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ

ಪಂದ್ಯದ ಕೊನೇ ಕ್ಷಣದಲ್ಲಿ ಧರಮ್ ವೀರ್ ಸಿಂಗ್ ಬಾರಿಸಿದ ಮಿಂಚಿನ ಗೋಲಿನ ನೆರವಿನೊಂದಿಗೆ ಪ್ರವಾಸಿ ಭಾರತ ಹಾಕಿ ತಂಡ, ಆತಿಥೇಯ...ನ್ಯೂಜಿಲೆಂಡ್

ಕಿವೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ
ಸಾಂದರ್ಭಿಕ ಚಿತ್ರ
Published On :

ಕ್ರೈಸ್ಟ್ ಚರ್ಚ್: ಪಂದ್ಯದ ಕೊನೇ ಕ್ಷಣದಲ್ಲಿ ಧರಮ್ ವೀರ್ ಸಿಂಗ್ ಬಾರಿಸಿದ ಮಿಂಚಿನ ಗೋಲಿನ ನೆರವಿನೊಂದಿಗೆ ಪ್ರವಾಸಿ ಭಾರತ ಹಾಕಿ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ 3-2 ಗೋಲುಗಳ ರೋಚಕ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಸರ್ದಾರ್ ಸಿಂಗ್ ಸಾರಥ್ಯದ ಭಾರತ ತಂಡ ನಾಲ್ಕು ಪಂದ್ಯ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದಂತಾಗಿದ್ದು, ಸರಣಿ ಕೈ ವಶಕ್ಕೆ ಭಾನುವಾರ (ಅ.11)ನಡೆಯಲಿರುವ ಕಡೆಯ ಪಂದ್ಯವನ್ನು ಕನಿಷ್ಟ ಗೆಲ್ಲಲಾಗದೆ ಹೋದರೂ, ಡ್ರಾ ಮಾಡಿಕೊಂಡರೆ ಸಾಕಾಗಿದೆ.

ವಿಜಯೀ ತಂಡದ ಪರ ಇನ್ನೆರಡು ಗೋಲುಗಳನ್ನು ರೂಪೀಂದರ್ ಪಾಲ್ ಸಿಂಗ್, ರಮಣ್‍ದೀಪ್ ಸಿಂಗ್ ದಾಖಲಿಸಿದರೆ, ಆತಿಥೇಯರ ಪರ ಜೆರೆಡ್ ಪಾಂಚಿಯಾ ಮತ್ತು ಸ್ಟೀವ್ ಎಡ್ವರ್ಡ್ಸ್ ತಲಾ ಒಂದೊಂದು ಗೋಲು ಬಾರಿಸಿದರು.

ಮೊದಲ ಪಂದ್ಯದಲ್ಲಿ 1-3 ಗೋಲುಗಳ ಅಂತರದಿಂದ ಸೋಲನುಭವಿಸಿದ್ದ ಭಾರತ,ಎರಡನೇ ಪಂದ್ಯವನ್ನು 2-1 ಗೋಲುಗಳ ಅಂತರದೊಂದಿಗೆ ಜಯಿಸಿ ಆತಿಥೇಯರಿಗೆ ತಿರುಗೇಟು ನೀಡಿತ್ತು. ಇತ್ತ ಮೂರನೇ ಪಂದ್ಯದಲ್ಲಿಯೂ ಆಕ್ರಮಣಕಾರಿ ಆಟವಾಡಿದ್ದ ಭಾರತ 2-0 ಅಂತರದ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಕಂಡಿತ್ತು.

ಏತನ್ಮಧ್ಯೆ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ಇನ್ನಷ್ಟು ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿಯಾಗಿ ಸೆಣಸಿತಾದರೂ, ಆತಿಧೇಯರಿಂದಲೂ ದಿಟ್ಟ ಹೋರಾಟ ಕಂಡುಬಂತು. ಆದಾಗ್ಯೂ ಮೊದಲ ಕ್ವಾರ್ಟರ್‍ನಲ್ಲಿ ಆಕಾಶ್‍ದೀಪ್ ಸಿಂಗ್ ಕಿವೀಸ್‍ನ `ಡಿ'ಆವರಣದೊಳಗೆ ಚೆಂಡನ್ನು ದೂಡಿಕೊಂಡು ಎಡಬದಿಯಿಂದ ಗೋಲುಪೆಟ್ಟಿಗೆಯೊಳಗೆ ನೂಕಿದರಾದರೂ, ನ್ಯೂಜಿಲೆಂಡ್‍ನ ನಿಕ್ ಹೇಗ್ ಅವರ ಆ ಯತ್ನವನ್ನು ವಿಫಲಗೊಳಿಸಿದರು. ಆದರೆ 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ರೂಪೀಂದರ್ ಪಾಲ್ ಸಿಂಗ್ ಗೋಲಾಗಿ  ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ತಂದಿತ್ತರು. ಆ ಬಳಿಕದ 15 ನಿಮಿಷಗಳ ಆಟದಲ್ಲಿ ಭಾರತ ಸಂಪೂರ್ಣವಾಗಿ ಆಕ್ರಮಣಕಾರಿ ಆಟದೊಂದಿಗೆ ವಿಜೃಂಬಿsಸಿತು. ಆದರೆ ಪಂದ್ಯದ 22ನೇ ನಿಮಿಷದಲ್ಲಿ ಭಾರತದ ರಕ್ಷಣಾ ವ್ಯೂಹವನ್ನು ಭೇದಿಸಿದ ಜೆರೆಡ್ ಪಾಂಚಿಯಾ ಗೋಲು ದಾಖಲಿಸಿ ಅಂತರವನ್ನು 1-1ಕ್ಕೆ ಸಮಗೊಳಿಸಿದರು. ಪಂದ್ಯದ ಮೊದಲಾರ್ಧ ಸಮಬಲದಲ್ಲಿ ಕೊನೆಕಂಡಿತು.ವಿರಾಮದ ಬಳಿಕ ನಡೆದ ಆಟವಂತೂ ಇನ್ನಷ್ಟು ರೋಚಕತೆಗೆ ಸಾಕ್ಷಿಯಾಯಿತು. ಒಂದಷ್ಟು ಒತ್ತಡದಿಂದಲೂ ಕೂಡಿದ್ದ ಈ ಭಾಗದಲ್ಲಿ ಪಂದ್ಯದ 45ನೇ ನಿಮಿಷದಲ್ಲಿ ಆಕಾಶ್‍ದೀಪ್ ಸಿಂಗ್ ಪಾಸ್ ಮಾಡಿದ ಚೆಂಡನ್ನು ರಮಣ್‍ದೀಪ್ ಸಿಂಗ್ ಗೋಲಾಗಿಸಿ ಭಾರತಕ್ಕೆ 2-1ರ ಮುನ್ನಡೆ ತಂದಿತ್ತರು. ಆದರೆ ಇದರಿಂದ ಧೃತಿಗೆಡದೆ ಹೋರಾಡಿದ ಕಿವೀಸ್ ಮತ್ತೆ ತಿರುಗೇಟು ನೀಡಿತು.52ನೇ ನಿಮಿಷದಲ್ಲಿ ಸ್ಟೀವ್ ಎಡ್ವಡ್ರ್ಸ್ ಬಾರಿಸಿದ ಗೋಲು ಮತ್ತೆ ಸಮಬಲಕ್ಕೆ ಕಾರಣವಾಯಿತು.

ಆಟದ ಕೊನೇ ಕ್ಷಣಗಳು ಸಮೀಪಿಸುತ್ತಿದ್ದಂತೆ ಭಾರತ ಮತ್ತೊಂದು ಗೋಲಿಗಾಗಿ ಇನ್ನಿಲ್ಲದಂತೆ ಕಾದಾಡಿತು.ಈ ಹಂತದಲ್ಲಿ ನಾಯಕ ಸರ್ದಾರ್ ಸಿಂಗ್ ಎಡಬದಿಯಿಂದ ಚೆಂಡನ್ನು ಕಿವೀಸ್‍ನ `ಡಿ' ಆವರಣದೊಳಗೆ ಕೊಂಡೊಯ್ದರೂ, ಗೋಲಾಗಿಸುವಲ್ಲಿ ವಿಫಲರಾದರು. ಕಿವೀಸ್ ಆಟಗಾರರು ಗೋಲಿಗಾಗಿ ವಿಫಲ ಯತ್ನ ನಡೆಸಿ ಸುಸ್ತಾದರು. 60ನೇ ನಿಮಿಷದಲ್ಲಿ ಬಿರುಗಾಳಿಯಂತೆ ನುಗ್ಗಿದ ಧರಮ್ ವೀರ್ ಸಿಂಗ್ ರಿವರ್ಸ್ ಹಿಟ್‍ನೊಂದಿಗೆ ಬಾರಿಸಿದ ಚೆಂಡು ಕಿವೀಸ್ ಗೋಲ್‍ಕೀಪರ್ ಕಣ್ತೆರೆಯುವಷ್ಟರಲ್ಲೇ ನೆಟ್ ಅನ್ನು ಅಪ್ಪಳಿಸಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.