3ನೇ ಟಿ20 ಪಂದ್ಯ ರದ್ದು: ಹರಿಣಗಳ ಕ್ಲೀನ್ ಸ್ವೀಪ್ ಆಸೆಗೆ ವರುಣ ಅಡ್ಡಿ
ಮಳೆಯಿಂದಾಗಿ ಮೈದಾನ ಒದ್ದೆಯಾದ ಹಿನ್ನೆಲೆಯಲ್ಲಿ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ರದ್ದಾಗಿದೆ...

Published On :
ಕೋಲ್ಕತಾ: ಮಳೆಯಿಂದಾಗಿ ಮೈದಾನ ಒದ್ದೆಯಾದ ಹಿನ್ನೆಲೆಯಲ್ಲಿ, ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ರದ್ದಾಗಿದೆ.
ಸಂಜೆಯ ವೇಳೆಗೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯವನ್ನು ತಡವಾಗಿ ಆರಂಭಿಸಲು ನಿರ್ಧರಿಸಲಾಯಿತು. ಸಂಜೆ 6.30ರ ಸುಮಾರಿಗೆ ಮಳೆ ನಿಂತಿತಾದರೂ, ಮೈದಾನದ ಔಟ್ ಫಿಲ್ಡ್ ನಲ್ಲಿ ನೀರು ನಿಂತಿದ್ದರಿಂದಾಗಿ ಟಾಸ್ ಹಾರಿಸುವ ಪ್ರಕ್ರಿಯೆಗೂ ಅಡ್ಡಿಯಾಯಿತು. ರಾತ್ರಿ 7.30ರ ಸುಮಾರಿಗೆ ಅಂಪೈರ್‍ಗಳಾದ ಎ.ಕೆ. ಚೌಧರಿ ಹಾಗೂ ವಿ.ಎ. ಕುಲಕರ್ಣಿಯವರು ಮೈದಾನಕ್ಕೆ ತೆರಳಿ ಒದ್ದೆ ನೆಲವನ್ನು ಪರೀಕ್ಷಿಸಿದರು.
ಇದು, ಪ್ರೇಕ್ಷಕರಲ್ಲಿ ಪಂದ್ಯ ಶುರುವಾಗಬಹುದೆಂಬ ನಿರೀಕ್ಷೆ ಹುಟ್ಟಿಸಿತು. ಆದರೆ, ಅದು ಸಾಧ್ಯವಾಗಲಿಲ್ಲ. ರಾತ್ರಿ ಎಂಟು ಗಂಟೆ ಯಾದರೂ ಪಂದ್ಯ ಆರಂಭವಾಗಲಿಲ್ಲ. ಆದರೂ, ರಾತ್ರಿ 9:30ರ ಹೊತ್ತಿಗೆ ಪುನಃ ಅಂಪೈರ್‍ಗಳು ಮೈದಾನ ಪರೀಕ್ಷಿಸಿದರು. ಆದರೂ, ಔಟ್ ಫೀಲ್ಡ್ ಒಣಗದೇ ಇದ್ದಿದ್ದರಿಂದ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಪ್ರಶಸ್ತಿ ವಿತರಣೆ: ಆನಂತರ, ಮೈದಾನದಲ್ಲಿ ನಡೆದ ಸರಳ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಟಿ20 ಸರಣಿ ವಿಜೇತ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು. ತಂಡದ ನಾಯಕ ಡು ಪ್ಲೆಸಿಸ್ ಪ್ರಶಸ್ತಿ ಸ್ವೀಕರಿಸಿದರು. ಇದಾದ ಮೇಲೆ, ಟೀಂ ಇಂಡಿಯಾ ನಾಯಕ ಧೋನಿ ರನ್ನರ್ ಅಪ್ ಪ್ರಶಸ್ತಿ ಪಡೆದರು. ಹರಿಣಳ ತಂಡದ ಜೆಪಿ ಡುಮಿನಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


