ವಿಶ್ವ ಕಪ್ ಅರ್ಹತೆ: ಭಾರತಕ್ಕೆ ಸತತ ನಾಲ್ಕನೇ ಮುಖಭಂಗ
ಫಿಫಾ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವ ಯತ್ನದಲ್ಲಿರುವ ಭಾರತೀಯ ಫುಟ್ಬಾಲ್ ತಂಡ ಮತ್ತೆ ಮುಗ್ಗರಿಸಿದೆ...

Published On :
ಆಶ್ಗಬಟ್: ಫಿಫಾ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳುವ ಯತ್ನದಲ್ಲಿರುವ ಭಾರತೀಯ ಫುಟ್ಬಾಲ್ ತಂಡ ಮತ್ತೆ ಮುಗ್ಗರಿಸಿದೆ.
ಗುರುವಾರ ನಡೆದ ತುರ್ಕ್‍ಮೆನಿಸ್ತಾನ್ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ 1-2 ಗೋಲುಗಳ ಅಂತರದಲ್ಲಿ ಮಣಿದಿದೆ.
ಪಂದ್ಯದ 8ನೇ ನಿಮಿಷದಲ್ಲಿ ಆತಿಥೇಯರ ಪರ ಗುಬಾಂಚ್ ಅಬೈಲೊವ್ ಮೊದಲ ಗೋಲು ದಾಖಲಿಸಿದರೆ, 60ನೇ ನಿಮಿಷದಲ್ಲಿ ಅರ್ಸಲಾನ್‍ಮಿನಟ್ ಅಮಾ ನೊವ್ ನಿರ್ಣಾಯಕ 2ನೇ ಗೋಲು ಬಾರಿಸಿದರು. ಭಾರತದ ಪರ, ಲಾಲ್‍ಪೆಕ್ಲುವಾ ಅವರಿಂದ 28ನೇ ನಿಮಿಷದಲ್ಲಿ ಗೋಲು ಬಂದಿತ್ತು. ಈ ಫಲಿತಾಂಶ ಸಹಿತ, ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸತತ 3 ಸೋಲು ದಾಖಲಿಸಿರುವ ಡಿ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದ್ದು ಏಷ್ಯಾ ಕಪ್‍ಗೂ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Footballಫುಟ್ಬಾಲ್indiaಭಾರತFIFAಫಿಫಾTurkmenistanWorld Cup qualifierವಿಶ್ವಕಪ್ ಅರ್ಹತೆ ಪಂದ್ಯತುರ್ಕ್ಮೆನಿಸ್ತಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


