ಸಿದ್ದವಾಗಿದೆ ಹರ್ಭಜನ್ ಸಿಂಗ್ -ಗೀತಾ ವಿವಾಹ ಆಮಂತ್ರಣ ಪತ್ರಿಕೆ
ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.

ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಇದೇ ತಿಂಗಳ 29 ರಂದು ಹಸೆಮಣೆ ಏರಲಿದ್ದಾರೆ. ಈಗಾಗಲೇ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.
ಡಿಸೈನರ್ ಆದಿ ಸಿಂಗ್ ಈ ಆಮಂತ್ರಣ ಪತ್ರಿಕೆಯನ್ನು ಸಿದ್ದ ಪಡಿಸಿದ್ದಾರೆ. ಇನ್ನು ವಧು ವರರ ವಿವಾಹ ಉಡುಪುಗಳು ಕೂಡ ರೆಡಿಯಾಗುತ್ತಿವೆ. ವಿವಾಹದ ದಿನ ಹರ್ಭಜನ್ ಸಿಂಗ್ ಶೇರ್ವಾನಿ ಧರಿಸಲಿದ್ದಾರಂತೆ. ರಾಘವೇಂದ್ರ ರಾಥೋಡ್ ಎಂಬವರು ಹರ್ಭಜನ್ ಗೆ ಕ್ಯಾಸ್ಟ್ಯೂಮ್ ಸಿದ್ದಗೊಳಿಸುತ್ತಿದ್ದಾರಂತೆ. ಇನ್ನು ವಿವಾಹದ ದಿನ ಗೀತಾ ಲೆಹಂಗಾ ಧರಿಸಲಿದ್ದಾರೆ. ಇನ್ನು ವಿವಾಹ 5 ದಿನಗಳ ಕಾಲ ಭರ್ಜರಿಯಾಗಿ ನಡೆಯಲಿದೆ. ಇನ್ನು ಪಂಜಾಬ್ ಶೈಲಿಯಲ್ಲೇ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.
ಇನ್ನು ವಿವಾಹ ಹರ್ಭಜನ್ ತವರುನಗರ ಜಲಂಧರ್‌ನಿಂದ 20 ಕಿಮೀ ದೂರದ ಪಾಗ್ವಾರಾದ ಹೊಟೆಲ್ ಕ್ಲಬ್ ಕಬಾನಾದಲ್ಲಿ ನಡೆಯಲಿದೆ. ಬಳಿ ಮುಂಬೈನಲ್ಲಿ ತಾಜ್ ಪ್ಯಾಲೇಸ್ ನಲ್ಲಿ ಆರಕ್ಷತೆ ನಡೆಯಲಿದೆ. ಇನ್ನು ವಿವಾಹಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಆಗಮಿಸಲಿದ್ದಾರೆ. ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


