ಗೋವಾಗೆ ಜಯದ ಆರಂಭ, ಡೆಲ್ಲಿಗೆ ಗೋಲಿನ ನಿರಾಸೆ
ಪಂದ್ಯದ ಆರಂಭಿಕ ಹಂತದಲ್ಲೇ ಸಿಕ್ಕ ಮುನ್ನಡೆಯಿಂದ ಪ್ರವಾಸಿ ತಂಡದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಎಫ್‌ಸಿ ಗೋವಾ ತಂಡ, ಐಎಸ್‌ಎಲ್ ...

ಮಾರ್ಗೋವಾ: ಪಂದ್ಯದ ಆರಂಭಿಕ ಹಂತದಲ್ಲೇ ಸಿಕ್ಕ ಮುನ್ನಡೆಯಿಂದ ಪ್ರವಾಸಿ ತಂಡದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಎಫ್‌ಸಿ ಗೋವಾ ತಂಡ, ಐಎಸ್‌ಎಲ್ ಪಂದ್ಯಾವಳಿಯ ಎರಡನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.
ಭಾನುವಾರ ಜವಾಹಾರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಗೋವಾ ತಂಡ, ಡೆಲ್ಲಿ ಡೈನಮೋಸ್ ಎಫ್‌ಸಿ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಎರಡನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ವಿಜಯೀ ತಂಡದ ಪರ ಮಂದಾರ್ ದೇಸಾಯಿ(3ನೇ), ರೈನಾಲ್ಡೋ(45) ಗೋಲು ದಾಖಲಿಸಿದರು.
ಆರಂಭದಲ್ಲೇ ಸಿಕ್ಕ ಮುನ್ನಡೆಯಿಂದ ಆಟಗಾರರು ಎಫ್‌ಸಿ ಗೋವಾ ಆಟಗಾರರು ಡೆಲ್ಲಿ ಆಟಗಾರರ ಮೇಲೆ ನಿಯಂತ್ರಣ ಸಾಧಿಸಿದರು. ಪಂದ್ಯದ ಮೊದಲಾರ್ಧದ ಅಂತ್ಯದಲ್ಲಿ ರೈನಾಲ್ಡೊ ತಂಡಕ್ಕೆ ಎರಡನೇ ಗೋಲು ತಂದುಕೊಡುವ ಮೂಲಕ ಅಂತರವನ್ನು 2-0ಗೆ ಹಿಗ್ಗಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


