ಕ್ರೀಡೆ

ವಿಶ್ವ ದೇಹದಾರ್ಢ್ಯ ಸ್ಪರ್ಧೆ: ಮಹಾಭಾರತದ ಧೃತರಾಷ್ಟ್ರನಿಗೆ ಚಿನ್ನದ ಪದಕ

ಮಹಾಭಾರತ ಧಾರಾವಾಹಿಯ ಧೃತರಾಷ್ಟ್ರ ಪಾತ್ರಧಾರಿ ಈಗ ಇಡೀ ವಿಶ್ವದ ಗಮನ ಸೆಳಿದಿದದ್ದಾರೆ. 100 ಮಕ್ಕಳ ತಂದೆಯಾಗಿ ಅಲ್ಲ, ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಠಾಕೂರ್...

ವಿಶ್ವ ದೇಹದಾರ್ಢ್ಯ ಸ್ಪರ್ಧೆ: ಮಹಾಭಾರತದ ಧೃತರಾಷ್ಟ್ರನಿಗೆ ಚಿನ್ನದ ಪದಕ
ಠಾಕೂರ್ ಅನೂಪ್ ಸಿಂಗ್
Published On :

ಮಹಾಭಾರತ ಧಾರಾವಾಹಿಯ ಧೃತರಾಷ್ಟ್ರ ಪಾತ್ರಧಾರಿ ಈಗ ಇಡೀ ವಿಶ್ವದ ಗಮನ ಸೆಳಿದಿದದ್ದಾರೆ. 100 ಮಕ್ಕಳ ತಂದೆಯಾಗಿ ಅಲ್ಲ, ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಠಾಕೂರ್ ಅನೂಪ್ ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ.

ಬ್ಯಾಂಕಾಕ್ ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಸ್ವರ್ಣ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಪೈಲಟ್ ಆಗಿದ್ದ ಠಾಕೂರ್ ಅನೂಪ್ ಸಿಂಗ್ ಮಹಾಭಾರತ ಧಾರಾವಾಹಿಯಲ್ಲಿ ಧೃತರಾಷ್ಟ್ರನ ಪಾತ್ರದಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದರು.

ನಂತರ 2008 ರಲ್ಲಿ  ಉಂಟಾದ ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಏರ್ ಲೈನ್ಸ್ ಮೇಲೂ ಉಂಟಾಯಿತು. ಹೀಗಾಗಿ ಅನಿವಾರ್ಯವಾಗಿ ಠಾಕೂರ್ ಅನೂಪ್ ಸಿಂಗ್ ಬಾಡಿ ಬಿಲ್ಡಿಂಗ್ ಗೆ ಮಾಡೆಲ್ ಆದರು.

ಆರು ಅಡಿ ಎತ್ತರವಿರುವ ಠಾಕೂರ್ ಅನೂಪ್ ಸಿಂಗ್ ತನ್ನ ಚೆಂದದ ಮೈ ಕಟ್ಟಿನಿಂದ ಎಲ್ಲರ ಮನಸೆಳೆದಿದ್ದಾರೆ. ಕಳೆದ ವಾರ ಬ್ಯಾಂಕಾಕ್ ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಸ್ಪರ್ಧೆಯಲ್ಲಿ 47 ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.