ಭಾರತೀಯ ಕ್ರಿಕೆಟ್ ಅನ್ನು 5 ವರ್ಷ ಹಿಂದಕ್ಕೆ ಹಾಕಿದ ಚಾಪೆಲ್: ಸಚಿನ್ ಕಿಡಿ
ಮಾಜಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಭಾರತೀಯ ಕ್ರಿಕೆಟ್ ಅನ್ನು ತಮ್ಮ ವ್ಯರ್ಥ ನಿರ್ಧಾರಗಳಿಂದಾಗಿ 5 ವರ್ಷ ಹಿಂದಕ್ಕೆ ಹಾಕಿದರು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೇಳಿದ್ದಾರೆ...

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಟೀಂ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಭಾರತೀಯ ಕ್ರಿಕೆಟ್ ಅನ್ನು ತಮ್ಮ ವ್ಯರ್ಥ ನಿರ್ಧಾರಗಳಿಂದಾಗಿ 5 ವರ್ಷ ಹಿಂದಕ್ಕೆ ಹಾಕಿದರು ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಹೇಳಿದ್ದಾರೆ.
ಗ್ರೇಗ್ ಚಾಪೆಲ್ ಕೋಚ್ ಆದ ಬಳಿಕ ಭಾರತ ಕ್ರಿಕೆಟ್ ತಂಡದಲ್ಲಿ ಆದ ದಢೀರ್ ಬದಲಾವಣೆಗಳ ಕುರಿತು ತಮ್ಮ ಜೀವನಚರಿತ್ರೆ ಪುಸ್ತಕ ಪ್ಲೇಯಿಂಗ್ ಇಟ್ ಮೈ ವೇ (Playing It My Way)ದಲ್ಲಿ ಬರೆದಿರುವ ಸಚಿನ್, ಗ್ರೇಗ್ ಚಾಪೆಲ್ ರ ದೂರದೃಷ್ಟಿ ಇಲ್ಲದ ನಿರ್ಧಾರಗಳನ್ನು ಖಂಡಿಸಿದ್ದಾರೆ. ಅಂತೆಯೇ ಗ್ರೇಗ್ ಚಾಪೆಲ್ ಸಹೋದರ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ರನ್ನು ಡರ್ಬನ್ ನ ಜಿಮ್ ನಲ್ಲಿ ಭೇಟಿಯಾಗಿ ಗ್ರೇಗ್ ವಿರುದ್ಧ ಸಚಿನ್ ವಿರೋಧ ವ್ಯಕ್ತಪಡಿಸಿದ್ದ ಕ್ಷಣಗಳ ಕುರಿತ ಮಾಹಿತಿಯನ್ನು ಸಚಿನ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಡರ್ಬನ್ ನ ಜಿಮ್ ವೊಂದರಲ್ಲಿ ಸಚಿನ್ ವರ್ಕ್ಔಟ್ ಮಾಡುತ್ತಿದ್ದ ವೇಳೆ ಕನ್ನಡಿ ನೋಡುತ್ತಾ ನಿಂತಿದ್ದರು. ಈ ವೇಳೆ ಜಿಮ್ ಗೆ ಆಗಮಿಸಿದ ಇಯಾನ್ ಚಾಪೆಲ್ ಸಚಿನ್ ರನ್ನು ನೋಡಿ, ಸಚಿನ್ ಅವರ ಯಶಸ್ಸಿನ ಗುಟ್ಟು ತನಗೆ ಈಗ ತಿಳಿಯಿತು ಎಂದು ಹೇಳುತ್ತಾರೆ. ಆಗ ಸಿಟ್ಟಿನಿಂದ ತಿರುಗಿದ ಸಚಿನ್, ನೀವು ಸಹೋದರರು ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾತನ್ನು ಬದಲಾಯಿಸುತ್ತೀರಿ. ಭಾರತೀಯ ಕ್ರಿಕೆಟ್ ನಲ್ಲಿ ಇಲ್ಲದ ಸಮಸ್ಯೆಗಳನ್ನು ಸೃಷ್ಟಿಸಿದ್ದೇ ನಿಮ್ಮ ಸಹೋದರ ಗ್ರೇಗ್ ಚಾಪೆಲ್. ಅವರ ತಪ್ಪು ನಿರ್ಧಾರಗಳಿಂದಾಗಿ ಭಾರತೀಯ ಕ್ರಿಕೆಟ್ 5 ವರ್ಷಗಳಷ್ಟು ಹಿಂದುಳಿಯುವಂತಾಯಿತು ಎಂದು ಕಿಡಿಕಾರಿದ್ದಾರೆ.
ಅಲ್ಲದೆ ಸಚಿನ್ ತಮ್ಮ ಆತ್ಮ ಚರಿತ್ರೆಯಲ್ಲಿ ಗ್ರೇಗ್ ಚಾಪೆಲ್ ರನ್ನು ರಿಂಗ್ ಮಾಸ್ಟರ್ ಎಂದು ಕರೆದಿದ್ದಾರೆ. ತಮ್ಮ ಇದೇ ಪ್ಲೇಯಿಂಗ್ ಇಟ್ ಮೈ ವೇ ಪುಸ್ತಕದಲ್ಲಿ ಸಚಿನ್ ಗ್ರೇಗ್ ಚಾಪೆಲ್ ಹೇಗೆ ತಮ್ಮ ಸಿದ್ಧಾಂತಗಳನ್ನು ಆಟಗಾರರ ಮೇಲೆ ಬಲವಂತವಾಗಿ ಹೇರುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ ತಮ್ಮ ಇಡೀ ವೃತ್ತಿ ಜೀವನದಲ್ಲಿ ಮಾಜಿ ಕ್ರಿಕೆಟಿಗರ ವಿರುದ್ಧ ವಾಗ್ವಾದ ನಡೆಸದ ಸಚಿನ್ ಗೆ ಗ್ರೇಗ್ ಹೇಗೆ ಕಾಟ ನೀಡುತ್ತಿದ್ದರು ಮತ್ತು ಬ್ಯಾಟಿಂಗ್ ನಲ್ಲಿ ವಿಫಲನಾದಾಗ ತಮ್ಮನ್ನು ಹೇಗೆ ಕಾಣುತ್ತಿದ್ದರು ಎಂಬಿತ್ಯಾದಿ ಅಂಶಗಳನ್ನು ಸಚಿನ್ ವಿವರಿಸಿದ್ದು, ಅದಕ್ಕೆ ತಮ್ಮ ಬ್ಯಾಟ್ ನಿಂದಲೇ ಹೇಗೆ ಉತ್ತರಿಸಿದರು ಎಂಬುದನ್ನು ಸಚಿನ್ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


