ಪ್ರಶಸ್ತಿ ಸುತ್ತಿಗೆ ಪ್ರೇರಣಾ, ಪಲ್ಹಾ ಲಗ್ಗೆ
ಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ಪ್ರೇರಣಾ ಭಾಂಬ್ರಿ ಮತ್ತು ನತಾಷ ಪಲ್ಹಾ ಆರ್ ಜಿಯುಎಚ್‍ಎಸ್ ಐಟಿಎಫ್ ಕಲಬುರ್ಗಿ ಓಪನ್ ಟೆನಿಸ್...

Published On :
ಕಲಬುರ್ಗಿ: ಅಗ್ರ ಶ್ರೇಯಾಂಕಿತ ಆಟಗಾರ್ತಿಯರಾದ ಪ್ರೇರಣಾ ಭಾಂಬ್ರಿ ಮತ್ತು ನತಾಷ ಪಲ್ಹಾ ಆರ್ ಜಿಯುಎಚ್‍ಎಸ್ ಐಟಿಎಫ್ ಕಲಬುರ್ಗಿ ಓಪನ್ ಟೆನಿಸ್ ಪಂದ್ಯಾವಳಿ ಯಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ.
ಗುರುವಾರ ನಡೆದ ಸಿಂಗಲ್ಸ್ ವಿಭಾಗದ ಮೊದಲ ಸೆಮಿ ಫೈನಲ್‍ನಲ್ಲಿ ಏಳನೇ ಶ್ರೇಯಾಂಕಿತೆ ನತಾಷ ಪಲ್ಹಾ ಅಗ್ರ ಕ್ರಮಾಂಕಿತ ಆಟಗಾರ್ತಿ ಈತೀ ಮೆಹ್ತಾ ವಿರುದ್ಧ 6-1, 6-3ರ ಎರಡು ನೇರ ಸೆಟ್‍ಗಳಲ್ಲಿ ಗೆಲುವು ಸಾಸಿದರೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪ್ರೇರಣಾ ಭಾಂಬ್ರಿ ಥಾಯ್ಲೆಂಡ್ನ ತಮಾಚನ್ ಮಾಮ್ ಕೂಂಥಾಡ್ ಎದುರು 6-1, 6-2 ನೇರ ಸೆಟ್‍ಗಳಲ್ಲಿ ಗೆಲುವು ಪಡೆದು ಫೈನಲ್‍ಗೆ ಅರ್ಹತೆ ಗಿಟ್ಟಿಸಿದರು. ಎರಡೂ ಸೆಮಿಫೈನಲ್ ಪಂದ್ಯಗಳು ಶೀಘ್ರಗತಿಯಲ್ಲಿಯೇ ಮುಕ್ತಾಯ ಕಂಡದ್ದುವಿಶೇಷ. ಮೊದಲ ಸೆಮಿಫೈನಲ್‍ನಲ್ಲಿ ಎರಡನೇ ಸೆಟ್‍ನಲ್ಲಿ ಪಲ್ಹಾ ಒಂದಷ್ಟು ಪ್ರತಿರೋಧ ಎದುರಿಸಿ 3 ಗೇಮ್ಗಳನ್ನು ಕಳೆದುಕೊಂಡರೂ, ಹಿನ್ನಡೆ ಅನುಭವಿಸಲಿಲ್ಲ. ಇನ್ನು ಎರಡನೇ ಸೆಮಿಫೈನಲ್‍ನಲ್ಲಂತೂ ಪ್ರೇರಣಾ ಕೂಡ ಸುಲಭ ಜಯ ಸಾಧಿಸಿದರು. ಧೃತಿ ಜೋಡಿಗೆ ಪ್ರಶಸ್ತಿ ಇನ್ನು ಶುಕ್ರವಾರ ಮುಕ್ತಾಯ ಕಂಡ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕಮ್ರಾನ್ ಕೌರ್ ಥಾಂಡಿ ಹಾಗೂ ಧೃತಿ ತಾತಾಚಾರ್ ವೇಣುಗೋಪಾಲ್ ಜೋಡಿ ನಿಧಿ ಚಿಲುಮುಲಾ ಹಾಗೂ ಈತಿ ಮೆಹ್ತಾ ಎದುರು 6-4, 6-7 (5), 10-7 ಸೆಟ್‍ಗಳಿಂದ ಜಯ ಸಾಧಿಸಿ ಪ್ರಶಸ್ತಿ ಪಡೆದರು. ನಾಲ್ಕನೇ ಶ್ರೇಯಾಂತ ಕಮ್ರಾನ್ ಮತ್ತು ಧೃತಿ ಜೋಡಿ ಎರಡನೇ ಶ್ರೇಯಾಂಕಿತ
ಜೋಡಿಯಾದ ನಿಧಿ ಮತ್ತು ಈತೀ ವಿರುದ್ಧ ಕಠಿಣ ಹೋರಾಟ ನಡೆಸಿ ಗೆಲುವು ಪಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


