ಕೋಲ್ಕತ್ತಾಗೆ ಗೆಲುವು
ಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್ ಅವರ ಹ್ಯಾಟ್ರಿಕ್ ಗೋಲ್ಗಳ ನೆರವಿನಿಂದಾಗಿ, ಅಟ್ಲೆಟಿಕೋ ಡಿ ಕೋಲ್ಕತಾ ತಂಡವು, ಶುಕ್ರವಾರ ನಡೆದ...

Published On :
ಕೋಲ್ಕತಾ: ಕೆನಡಾ ಮೂಲದ ಆಟಗಾರ ಇಯಾನ್ ಹ್ಯೂಮ್ ಅವರ ಹ್ಯಾಟ್ರಿಕ್ ಗೋಲ್ಗಳ ನೆರವಿನಿಂದಾಗಿ, ಅಟ್ಲೆಟಿಕೋ ಡಿ ಕೋಲ್ಕತಾ ತಂಡವು, ಶುಕ್ರವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯದಲ್ಲಿ ಪುಣೆ ಎಫ್ ಸಿ ವಿರುದ್ಧ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪಂದ್ಯದ 9ನೇ ನಿಮಿಷದಲ್ಲಿ ಕೋಲ್ಕತಾ ತಂಡಕ್ಕೆ ಮೊದಲ ಗೋಲ್ನ ಸಂಭ್ರಮ ತಂದಿತ್ತ ಹ್ಯೂಮ್ , ಆನಂತರ, 48ನೇ, 82ನೇ ನಿಮಿಷಗಳಲ್ಲೂ ಗೋಲು ದಾಖಲಿಸಿದರು. ಸರ್ಬಿಯಾದ ಆಟಗಾರ ಡೆಜಾನ್ ಲೆಕಿಕ್ 90ನೇ ನಿಮಿಷದಲ್ಲಿ ತಂಡಕ್ಕೆ 4ನೇ ಗೋಲು ತಂದುಕೊಟ್ಟರು. ಎದುರಾಳಿಗಳ ಪರ ದಾಖಲಾದ ಏಕೈಕ ಗೋಲು, ಪಂದ್ಯದ 87ನೇ ನಿಮಿಷದಲ್ಲಿ ಆಂಡ್ರಿಯನ್ ಮುಟು ಅವರಿಂದ ದಾಖಲಾಯಿತು.
ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಕೋಲ್ಕತಾ ತಂಡವು, ತನ್ನ ರಕ್ಷಣಾ ವಿಭಾಗದಲ್ಲಿ ಭಾರಿ ಛಾತಿ ತೋರಿತು. ಇದರಿಂದಾಗಿ, ಗೋವಾ ತಂಡದಹಲವಾರು ಗೋಲು ಯತ್ನಗಳು ವಿಫಲಗೊಂಡವು. ಮತ್ತೊಂದೆಡೆ, ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಹ್ಯೂಮ್ , ಒಂದರ ಮೇಲೊಂದರಂತೆ ಗೋಲು ಗಳಿಸಿದ ಮೇಲೆ, ಎದುರಾಳಿಗಳ ಆತ್ಮಸ್ಥೈರ್ಯ ಕುಗ್ಗಿದಂತೆ ಭಾಸವಾಯಿತು. ಇದೆಲ್ಲದರ ಫಲವಾಗಿ ಕೋಲ್ಕತಾ
ಜಯಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Atletico De Kolkataಇಂಡಿಯನ್ ಸೂಪರ್ ಲೀಗ್Iain HumeFC Pune CityIndian Super League footballಇಯಾನ್ ಹ್ಯೂಮ್ಅಟ್ಲೆಟಿಕೋ ಡಿ ಕೋಲ್ಕತಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


