ಕ್ರೀಡೆ

ವನಿತೆಯರಿಗೆ ಸರಣಿ ಸೋಲು

ಅರ್ಜೈಂಟೀನಾ ವಿರುದ್ಧದ ಅಭ್ಯಾಸ ಹಾಕಿ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ, 14 ಗೋಲುಗಳ ಅಂತರದಿಂದ ಸೋಲು ಕಂಡಿದೆಯಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 10 ಅಂತರದಿಂದ ಸೋತಿದೆ...

ವನಿತೆಯರಿಗೆ ಸರಣಿ ಸೋಲು
ಭಾರತೀಯ ಮಹಿಳಾ ಹಾಕಿ ತಂಡ (ಸಂಗ್ರಹ ಚಿತ್ರ)
Published On :

ಬ್ಯುನೋಸ್ ಐರಿಸ್: ಅರ್ಜೈಂಟೀನಾ ವಿರುದ್ಧದ ಅಭ್ಯಾಸ ಹಾಕಿ ಸರಣಿಯ ದ್ವಿತೀಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ, 14 ಗೋಲುಗಳ ಅಂತರದಿಂದ ಸೋಲು ಕಂಡಿದೆಯಲ್ಲದೆ, ಎರಡು ಪಂದ್ಯಗಳ ಸರಣಿಯನ್ನು 10 ಅಂತರದಿಂದ ಸೋತಿದೆ.

ಗುರುವಾರ ನಡೆದ ಪಂದ್ಯದಲ್ಲಿ, ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅರ್ಜೈಂಟೀನಾ ಪರ ಪಂದ್ಯದ ಮೊದಲಾರ್ಧಲ್ಲಿ ಮಾರ್ಟಿನಾ ಕ್ಯಾವೆಲ್ಲೆರೊ, ಪೈಲರ್ ರೊಮಾಂಗ್ ತಲಾ ಒಂದೊಂದು ಗೋಲು  ಗಳಿಸಿದರೆ, ನೋಯೆಲ್ ಬ್ಯಾರಿನೊವೊ ಮತ್ತೆರಡು ಗೋಲು ದಾಖಲಿಸಿದರು. ಭಾರತದ ಪರ ದಾಖಲಾದ ಏಕೈಕ ಗೋಲ್ ಅನ್ನು ವಂದನಾ ಕಟಾರಿಯಾ ತಂದುಕೊಟ್ಟರು. ಇತ್ತಂಡಗಳ ನಡುವಿನ  ಮೊದಲ ಪಂದ್ಯ 22 ಸಮಬಲದಲ್ಲಿ ಡ್ರಾ ಆಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.