ಕ್ರೀಡೆ

ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಒಟ್ಟು 6 ದಾಖಲೆ

ಇಲ್ಲಿನ ಸ್ವರಾಜ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಬಾಲಕ- ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ...

ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಒಟ್ಟು 6 ದಾಖಲೆ
ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆ ತಂಡ
Published On :

ಮೂಡುಬಿದರೆ: ಇಲ್ಲಿನ ಸ್ವರಾಜ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಬಾಲಕ-  ಬಾಲಕಿಯರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು  ತನ್ನದಾಗಿಸಿಕೊಂಡಿದೆ.

ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಾಲಕಿಯರ ವಿಭಾಗದಲ್ಲಿ 74 ಹಾಗೂ ಬಾಲಕರ  ಭಾಗದಲ್ಲಿ 38  ಅಂಕಗಳೊಂದಿಗೆ ಎರಡೂ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆಯಿತು. ಬಾಲಕರ  ಭಾಗದಲ್ಲಿ 21 ಹಾಗೂ ಬಾಲಕಿಯರ ವಿಭಾಗದಲ್ಲಿ 19 ಅಂಕಗಳನ್ನು ಪಡೆದ ವಿದ್ಯಾನಗರ ಕ್ರೀಡಾ  ಹಾಸ್ಟೆಲ್ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಉಡುಪಿ ಜಿಲ್ಲೆಯನ್ನು
ಪ್ರತಿನಿಧಿಸಿದ್ದ ಅಬಿನ್ ಬಿ. ದೇವಾಡಿಗ ಬಾಲಕರ ವಿಭಾಗದಲ್ಲಿ ಹಾಗೂ ವಿದ್ಯಾನಗರ ಕ್ರೀಡಾ  ಸ್ಟೆಲ್‍ನ ಧನೇಶ್ವರಿ ಎ.ಟಿ. ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಪಡೆದಿದ್ದಾರೆ.

2 ಹೊಸ ಕೂಟ ದಾಖಲೆ: ಮೊದಲ ದಿನ 4 ಹೊಸ ಕೂಟ ದಾಖಲೆಗಳಾಗಿದ್ದು, ಕೊನೆಯ ದಿನ  ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ತಲಾ ಒಂದರಂತೆ ಒಟ್ಟು ಎರಡು ದಾಖಲೆ  ಹೊಮ್ಮಿದವು. ಬಾಲಕರ ಪೋಲ್ ವಾಲ್ಟ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಶ್ರೀಮಂಥ್ 3.40 ಮೀ.  ಎತ್ತರ ಜಿಗಿದು, 2011-12ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಮ್ಮದ್ ಹಾಸನ್ ಅವರ 3.20  ಮೀ. ದಾಖಲೆಯನ್ನು ಹಿಂದಿಕ್ಕಿದರೆ, ಬಾಲಕಿಯರ ವಿಭಾಗದ ಜಾವೆಲಿನ್ ಎಸೆತದಲ್ಲಿ ಉಡುಪಿಯ  ರಿಷ್ಮಾ ಎಸ್. ಸನಿಲ್ 34.36 ಮೀ. ದೂರ ಎಸೆಯುವ ಮೂಲಕ 2007-08ರಲ್ಲಿ  ಬೆಂಗಳೂರು ಉತ್ತರದ ಸಾಧನಾ ಬಿ. ಅವರ 31.93ಮೀ. ದೂರದ ದಾಖಲೆಯನ್ನು   ಹಿಮ್ಮೆಟ್ಟಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.