ಕ್ರೀಡೆ

ಪ್ರೇರಣಾ ಭಾಂಬ್ರಿ ಚಾಂಪಿಯನ್

ತೀವ ಜಿದ್ದಾಜಿದ್ದಿನಿಂದ ಕೂಡಿದ್ದಪಂದ್ಯದಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ ಅಗ್ರ ಕ್ರಮಾಂಕಿತ ಆಟಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರ...

ಪ್ರೇರಣಾ ಭಾಂಬ್ರಿ ಚಾಂಪಿಯನ್
ಪ್ರೇರಣಾ ಭಾಂಬ್ರಿ
Published On :
ಕಲಬುರ್ಗಿ: ಅತೀವ ಜಿದ್ದಾಜಿದ್ದಿನಿಂದ ಕೂಡಿದ್ದಪಂದ್ಯದಲ್ಲಿ ತನ್ನೆಲ್ಲಾ ಅನುಭವವನ್ನೂ ಧಾರೆ ಎರೆದ ಅಗ್ರ ಕ್ರಮಾಂಕಿತ ಆಟ ಗಾರ್ತಿ ಪ್ರೇರಣಾ ಭಾಂಬ್ರಿ ಶನಿವಾರ ಮುಕ್ತಾಯ ಕಂಡ ಕೆಯುಡಿಎ ಕಲಬುರ್ಗಿ  ಐಟಿಎಫ್  10,000 ಡಾಲರ್ ಬಹುಮಾನ ಮೊತ್ತದ ಮಹಿಳಾ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆದರು. ಇಲ್ಲಿನ ಚಂದ್ರಶೇಖರ ಪಾಟೀಲ್  ಟೆನಿಸ್ ಕೋರ್ಟ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ- ಯಾಗಿಯೂ ಟೂರ್ನಿಯಾ ದ್ಯಂತಪ್ರಭಾವಿ ಪ್ರದರ್ಶನ ನೀಡಿದ್ದ ರಿಯಾ ಭಾಟಿಯಾ ಎದುರು 4-6, 7-5, 6-4
ಸೆಟ್‍ಗಳಿಂದ ಪ್ರೇರಣಾ ಜಯಶಾಲಿಯಾದರು. ಫೆನೆಸ್ಟಾ ಓಪನ್ ನ್ಯಾಷನಲ್ಸ್ ಮತ್ತು ಲೂಧಿಯಾನ ಓಪನ್ ಪ್ರಶಸ್ತಿಯ ಬಳಿಕ ಈ ಋತುವಿನಲ್ಲಿ ಅವರು ಜಯಿಸಿದ ಮುರನೇ ಪ್ರಶಸ್ತಿ ಇದು. ಬರೋಬ್ಬರಿ 2 ತಾಸು ಮತ್ತು 32 ನಿಮಿಷಗಳ ಕಾಲ ನಡೆದ ಸೆಣಸಾಟದಲ್ಲಿ ಕೊನೆಗೂ ಅನುಭವಿ ಆಟಗಾರ್ತಿ ಪ್ರೇರಣಾ ಎದುರು ರಿಯಾ ಸೋಲೊಪ್ಪಿಕೊಂಡರು.
ಧೃತಿ ಜೋಡಿಗೆ ಪ್ರಶಸ್ತಿ: ಏತನ್ಮಧ್ಯೆ  ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಧೃತಿ ಟಾಟಾಚಾರ್ ವೇಣುಗೋಪಾಲ್ ಮತ್ತು ಕಮರ್ನ್ ಕೌರ್ ಥಾಂಡಿ ಜೋಡಿ ಪ್ರೇರಣಾ ಭಾಂಬ್ರಿ ಮತ್ತು ರಿಯಾ ಭಾಟಿಯಾ ಜೋಡಿಯನ್ನು 4-6, 7-5, 6-4 ಸೆಟ್‍ಗಳಲ್ಲಿ ಜಯಿಸಿ ಚಾಂಪಿಯನ್ ಎನಿಸಿತು. ಇದರ ಫಲವಾಗಿ ಈ ಜೋಡಿ 42,000 ರು. ಹಾಗೂ ರನ್ನರ್‍ಅಪ್ ಜೋಡಿ 23,000 ರು. ಬಹುಮಾನ ಪಡೆಯಿತು. ಧೃತಿ ಜೋಡಿ 12 ಪಾಯಿಂಟ್ಸ್ ಕಲೆಹಾಕಿದರೆ, ಪ್ರೇರಣಾ-ರಿಯಾ ಜೋಡಿ 7 ರೇಟಿಂಗ್ ಪಾಯಿಂಟ್ಸ್ ಗಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.