ರಣಜಿ ಟೂರ್ನಿ: ಶಾರ್ದೂಲ್ ದಾಳಿಗೆ ಕಂಗೆಟ್ಟ ರೈಲ್ವೇಸ್
ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಅವರ ದಾಳಿಗೆ ತತ್ತರಗೊಂಡ ರೈಲ್ವೇಸ್ ತಂಡ, ಭಾನುವಾರ ಆರಂಭಗೊಂಡ ರಣಜಿ ಟೂರ್ನಿಯ ಬಿ ಗುಂಪಿನ ಪಂದ್ಯದ ತನ್ನ ಮೊದಲ ಇನಿಂಗ್ಸ್‍ನಲ್ಲಿ 217 ರನ್‍ಗಳಿಗೆ ಆಲೌಟ್ ಆಯಿತು.

ಮುಂಬೈ: ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಅವರ ದಾಳಿಗೆ ತತ್ತರಗೊಂಡ ರೈಲ್ವೇಸ್ ತಂಡ, ಭಾನುವಾರ ಆರಂಭಗೊಂಡ ರಣಜಿ ಟೂರ್ನಿಯ ಬಿ ಗುಂಪಿನ ಪಂದ್ಯದ ತನ್ನ ಮೊದಲ ಇನಿಂಗ್ಸ್ ನಲ್ಲಿ 217 ರನ್‍ಗಳಿಗೆ ಆಲೌಟ್ ಆಯಿತು. ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದು ಕೊಂಡ ರೈಲ್ವೇಸ್ ತಂಡಕ್ಕೆ ಮೊದಲಿನಲ್ಲೇ ಆಘಾತ ನೀಡಿದರು.
ಆರಂಬಿsಕ ವಾಕಾಸ್ಕರ್ ಅವರನ್ನು ಪೆವಿಲಿಯನ್‍ಗೆ ಅಟ್ಟಿದ ಶಾರ್ದೂಲ್, ಆನಂತರ, ಮೂರನೇ ಕ್ರಮಾಂಕದ ಚೆಲುವರಾಜ್, ವಿ. ಸಿಂಗ್ ಹಾಗೂ ಎಸ್.ಎಸ್. ಮಿಶ್ರಾ ಅವರನ್ನು ಅವರ ವಿಕೆಟ್ ಕಬಳಿಸಿ, ರೈಲ್ವೇಸ್ ಮಧ್ಯಮ ಕ್ರಮಾಂಕ ಚಿಗುರದಂತೆ ನೋಡಿಕೊಂಡರು.
ಶಾರ್ದೂಲ್ ದಾಳಿಗೆ ಕೈಜೋಡಿಸಿದ ಧವಳ್ ಕುಲಕರ್ಣಿ ಎದುರಾಳಿಗಳಿಗೆ ಪೆಟ್ಟು ಕೊಟ್ಟರು. ಕ್ರೀಸ್‍ನಲ್ಲಿ ಗಟ್ಟಿಯಾಗಿ ಬೇರೂರಿ ಅರ್ಧಶತಕ ಗಳಿಸಿ ಮುಂದುವರೆದಿದ್ದ ಅರಿಂದಮ್ ಘೋಷ್ ಅವರನ್ನು ಪೆವಿಲಿಯನ್ ಗೆ ಅಟ್ಟಿದ ಧಾಬೋಲ್ಕರ್ ಸಹ ತಂಡಕ್ಕೆನೆರವಾದರು.
ಅಂತಿಮವಾಗಿ, ರೈಲ್ವೇಸ್ 217 ರನ್ ಮೊತ್ತಕ್ಕೆ ಸರ್ವಪತನ ಕಂಡಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಮುಂಬೈ ಗೂ ಸಂಕಷ್ಟ ಎದುರಾಯಿತು. ದಿನಾಂತ್ಯಕ್ಕೆ ಆರಂಭಿಕ ಬಿಸ್ತಾ ಮತ್ತು ಧವಳ್ ಕುಲಕರ್ಣಿ ಅವರ ವಿಕೆಟನ್ನೂ ಕಳೆದುಕೊಂಡಿತು. ಈ ಎರಡೂ ವಿಕೆಟ್ ಗಳನ್ನು ಕ್ರಮವಾಗಿ ಅನುರೀತ್ ಸಿಂಗ್ ಹಾಗೂ ಕರಣ್ ಶರ್ಮಾ ಪಡೆದರು. ಒಟ್ಟಾರೆ ಆತಿಥೇಯ ಮುಂಬೈ 2 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


