ಸೆಮಿಫೈನಲ್‌ಗೆ ಸೈನಾ ನೆಹಾಲ್
ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ...

ಫುಜೌ: ಹಾಲಿ ಚಾಂಪಿಯನ್ ಭಾರತದ ಸೈನಾ ನೆಹ್ವಾಲ್ ತಮ್ಮ ಅತ್ಯುತ್ತಮ ಪ್ರದರ್ಶನ ಮುಂದುವರೆಸಿದ್ದು, ಚೀನಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸೀರೀಸ್ ಟೂರ್ನಿಯ ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತೆ ಸೈನಾ ತಮ್ಮ ಪ್ರತಿಸ್ಪರ್ಧಿ ಜಪಾನ್ ನ ನೊಜೊಮಿ ಒಕುಹರಾ ವಿರುದ್ಧ ೨೧-೧೬, ೨೧-೧೩ ನೇರ ಸೆಟ್‌ಗಳ ಅಂತರದಲ್ಲಿ ಜಯಿಸಿದರು. ಪಂದ್ಯದಲ್ಲಿ ಹೆಚ್ಚು ಒತ್ತಡ ಎದುರಿಸದೇ ಆಡಿದ ಸೈನಾ ಅನಾಯಾಸವಾಗಿ ಜಯಪಡೆದರು.
೪೨ ನಿಮಿಗ ಳ ಕಾಲ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್, 10ನೇ ರ್ಯಾಕಿಂಗ್ ನ ನೊಜೊಮಿ ವಿರುದ್ಧ ಸುಲಭವಾಗಿ ನಿಯಂತ್ರಣ ಸಾಧಿಸಿದರು. ಪಂದ್ಯದ ಆರಂಭಿಕ ಹಂತದಿಂದ ಅಂತ್ಯದವರೆಗೂ ಸೈನಾಗೆ ಪ್ರತಿರೋಧ ನೀಡಲು ನೊಜೊಮಿ ಸಂಪೂರ್ಣವಾಗಿ ವಿಫಲರಾದರು. ಆ ಮೂಲಕ ಸೈನಾ ನೊಜೊಮಿ ವಿರುದ್ಧ ಸತತ ನಾಲ್ಕು ಪಂದ್ಯಗಳಲ್ಲೂ ಗೆದ್ದ ಸಾಧನೆ ಮಾಡಿದ್ದಾರೆ.
ಸೈನಾ ನೆಹ್ವಾಲ್ ತಮ್ಮ ಮುಂದಿನ ಪಂದ್ಯದಲ್ಲಿ ೨೦೧೧ರ ವಿಶ್ವ ಚಾಂಪಿಯನ್ ಮತ್ತು ೨೦೧೨ರ ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಯಿಹಾನ್ ವಾಂಗ್ ವಿರುದ್ಧ ಸೆಣಸಲಿ ದ್ದಾರೆ. ಸೈನಾ ಅವರ ಪ್ರಬಲ ಪ್ರತಿಸ್ಪಧಿಗಳಲ್ಲಿ ವಾಂಗ್ ಪ್ರಮುಖರಾಗಿದ್ದು, ಈಕೆ ವಿರುದ್ಧ ಸೈನಾ ೯ ಬಾರಿ ಸೋಲನುಭವಿಸಿದ್ದಾರೆ. ಶನಿವಾರ ನಡೆಯಲಿರುವ ಪಂದ್ಯ ಸೈನಾ ಪಾಲಿಗೆ ಮಹತ್ವವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


