ಕ್ರೀಡೆ

ಚೀನಾ ಓಪನ್ ಸೂಪರ್ ಸಿರೀಸ್ :ಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್

ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಚೀನಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಸುತ್ತು ಪ್ರವೇಶಿಸಿದ್ದಾರೆ...

ಚೀನಾ ಓಪನ್ ಸೂಪರ್ ಸಿರೀಸ್ :ಫೈನಲ್ ಪ್ರವೇಶಿಸಿದ ಸೈನಾ ನೆಹ್ವಾಲ್
ಸೈನಾ ನೆಹ್ವಾಲ್
Published On :

ಚೀನಾ: ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಚೀನಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ ಸುತ್ತು  ಪ್ರವೇಶಿಸಿದ್ದಾರೆ.

ಹೈಕ್ಸಿಯಾ ಒಲಿಂಪಿಕ್ ಸ್ಪೋರ್ಟ್‌ ಕೇಂದ್ರದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸೈನಾ 21–13, 21–18ರಲ್ಲಿ ಚೀನಾದ ಯಿಹಾನ್ ವಾಂಗ್ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸೈನಾ ಕೇವಲ 42 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಹೈದರಾಬಾದ್‌ನ ಈ ಆಟಗಾರ್ತಿಗೆ ವಿಶ್ವ ಮಾಜಿ ನಂಬರ್ 1 ಆಟಗಾರ್ತಿ ವಾಂಗ್ ವಿರುದ್ಧ ದೊರೆತ ಸತತ ಮೂರನೇ ಗೆಲುವು ಇದಾಗಿದೆ. ಈ ಮೂಲಕ ತಮ್ಮ ವಾಂಗ್ ವಿರುದ್ಧದ ಸೋಲಿನ ಅಂತರವನ್ನು 4–9ಕ್ಕೆ ಉತ್ತಮ ಪಡಿಸಿಕೊಂಡರು.

ವಿಶ್ವ ಅಗ್ರ ಎರಡನೇ ಕ್ರಮಾಂಕದ ಆಟಗಾರ್ತಿ ಸೈನಾ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲೀ ಕ್ಸುರೆಯಿ ಅವರ ಸವಾಲು ಎದುರಿಸಲಿದ್ದಾರೆ. ಲೀ ಅವರು ಸೈನಾ ವಿರುದ್ಧ 9–2 ಗೆಲುವಿನ ಉತ್ತಮ ದಾಖಲೆ ಹೊಂದಿದ್ದಾರೆ.

25 ವರ್ಷದ ಸೈನಾ ಸೆಮಿಫೈನಲ್‌ ಪಂದ್ಯದ ವೇಳೆ ಅಂಗಳದಲ್ಲಿ ಮಿಂಚು ಹರಿಸಿದರು. ಅವರ ಚುರು‌‌ಕುತನ, ಚಲನೆ, ವೇಗ ಹಾಗೂ ಸ್ಮ್ಯಾಷ್‌ಗಳ ಎದುರು ತಕ್ಕ ಪ್ರದರ್ಶನ ತೋರುವಲ್ಲಿ ವಾಂಗ್ ವಿಫಲರಾದರು.

ಮೊದಲ ಗೇಮ್‌ನಲ್ಲಿ ಬಿರುಸಿನ ಆಟಕ್ಕೆ ಒತ್ತು ನೀಡಿದ ಸೈನಾಗೆ ಎದುರಾಳಿ ವಾಂಗ್‌ ಕೂಡ ತಕ್ಕ ಪೈಪೋಟಿ ಒಡ್ಡಿದರು. ಆದರೆ 14–13ರಲ್ಲಿ ಮುನ್ನಡೆ ಪಡೆದ ಬಳಿಕ ಸತತ ಏಳು ಪಾಯಿಂಟ್‌ ಬಾಚಿದ ಸೈನಾ ಗೇಮ್‌ ಜಯಗಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.