ಕ್ರೀಡೆ

ಯುನೈಟೆಡ್‍ಗೆ ತಂಡಕ್ಕೆ ಜಯ ತಂದ ಸಿಮಾವೊ ಸಬ್ರೊಸಾ

ಪೋರ್ಚುಗೀಸ್ ಆಟಗಾರ ಸಿಮಾವೊ ಸಬ್ರೊಸಾ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಪ್ರವಾಸಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡ, ಶನಿವಾರ ನಡೆದ...

ಯುನೈಟೆಡ್‍ಗೆ ತಂಡಕ್ಕೆ ಜಯ ತಂದ ಸಿಮಾವೊ ಸಬ್ರೊಸಾ
ಫುಟ್ಬಾಲ್
Published On :
ಕೋಲ್ಕತಾ: ಪೋರ್ಚುಗೀಸ್ ಆಟಗಾರ ಸಿಮಾವೊ ಸಬ್ರೊಸಾ ಗಳಿಸಿದ ಏಕೈಕ ಗೋಲಿನ ಸಹಾಯದಿಂದ ಪ್ರವಾಸಿ ನಾರ್ತ್ ಈಸ್ಟ್ ಯುನೈಟೆಡ್ ಎಫ್ಸಿ ತಂಡ, ಶನಿವಾರ ನಡೆದ ಐಎಸ್‍ಎಲ್ ಪಂದ್ಯದಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು 1-0 ಗೋಲಿನ ರೋಜಕ ಜಯ ಸಾಧಿಸಿತು.
ಕಳೆದ ತಿಂಗಳ 23ರಂದು ತನ್ನ ತವರಿನಲ್ಲೇ ಕೋಲ್ಕತಾ ತಂಡವನ್ನು ಎದುರಿಸಿದ್ದ ನಾರ್ತ್ ಈಸ್ಟ್, ಆಗಲೂ 1-0 ಗೋಲು ಅಂತರದಿಂದ ಜಯ ಸಾಧಿಸಿತ್ತು. ಈ ಬಾರಿ, ಅಟ್ಲೆಟಿಕೋ ತಂಡದ ತವರಿನಲ್ಲೇ ಪುನಃ ಅದೇ ತಂಡವನ್ನು ಎದುರಿಸಿದ ಯುನೈಟೆಡ್ ಪಡೆ, ಅದೇ ಅಂತರದಲ್ಲಿ ಪಂದ್ಯ ಗೆದ್ದಿದ್ದು ವಿಶೇಷ. ಇದಲ್ಲದೆ, ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಕಾಣದೇ ನಿರಾಸೆ ಅನುಭವಿಸಿದ್ದ ನಾರ್ತ್ ಈಸ್ಟ್, ಈ ಗೆಲುವಿನಿಂದ ತನ್ನ ಆತ್ಮವಿಶ್ವಾಸವನ್ನು ಮರಳಿ ಪಡೆದಿದೆ. 
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ಆರಂಭದಿಂದಲೂ ಇತ್ತಂಡಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತು. ಗೋಲು ಗಳಿಸಲು ಉಭಯ ತಂಡಗಳ ಆಟಗಾರರು ನಡೆಸಿದ ಪ್ರಯತ್ನಗಳು ವಿಫಲವಾಗುತ್ತಿದ್ದವು. ಆದರೆ, ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು ನಾರ್ತ್ ಈಸ್ಟ್ ತಂಡ. 9ನೇ ನಿಮಿಷದಲ್ಲಿ ತಮಗೆ ಸಿಕ್ಕಿದ ಪೆನಾಲ್ಟಿ ಯನ್ನು ಗೋಲಾಗಿ ಪರಿವರ್ತಿಸಿದ ಸಿಮಾವೊ ಸಬ್ರೊಸಾ, ನಾರ್ತ್ ಈಸ್ಟ್‍ಗೆ ಮೊದಲ ಗೋಲಿನ ಸಂಭ್ರಮ ತಂದಿತ್ತರು. 
ಈ ಪಂದ್ಯದ ಫಲಿತಾಂಶದ ಆಧಾರದ ಮೇಲೆ, ಹಾಲಿ ಐಎಸ್‍ಎಲ್ ಅಂಕಪಟ್ಟಿಯಲ್ಲಿ ನಾರ್ತ್‍ಈಸ್ಟ್ ತಂಡ, ಈವರೆಗೆ ಆಡಿರುವ 8 ಪಂದ್ಯಗಳಿಂದ ಒಟ್ಟು 10 ಅಂಕಗಳನ್ನು ಸಂಪಾದಿಸಿ 7ನೇ ಸ್ಥಾನದಲ್ಲಿದ್ದರೆ, ಅಟ್ಲೆಟಿಕೊ ಡಿ ಕೊಲ್ಕತಾ ತಂಡ ಒಟ್ಟು 8 ಪಂದ್ಯಗಳಿಂದ 10 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.