ಕ್ರೀಡೆ

ರಕ್ಷಿತ್ ಗೆ ಚಿನ್ನ

ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 20 ವರ್ಷದವರೊಳಗಿನ ಬಾಲಕರ 10000 ಮೀ. ನಡಿಗೆಯಲ್ಲಿ ಧಾರವಾಡದ ಬಿ.ಎಸ್.ರಕ್ಷಿ ತ್..

ರಕ್ಷಿತ್ ಗೆ ಚಿನ್ನ
ಸಂಗ್ರಹ ಚಿತ್ರ
Published On :

ಬೀದರ್: ಕರ್ನಾಟಕ  ರಾಜ್ಯ ಅಥ್ಲೆಟಿಕ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್  20 ವರ್ಷದವರೊಳಗಿನ ಬಾಲಕರ 10000 ಮೀ. ನಡಿಗೆಯಲ್ಲಿ  ಧಾರವಾಡದ ಬಿ.ಎಸ್.ರಕ್ಷಿ ತ್ (50.27 ನಿ.) ಚಿನ್ನದ ಪದಕ ಸಂಪಾದಿಸಿದ್ದಾರೆ.

ಇಲ್ಲಿನ ಪಶು ವೈದ್ಯ ವಿವಿ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗಿರುವ ಮೂರು ದಿನಗಳ ರಾಜ್ಯ ಅಂತರ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಬೆಂಗಳೂರು ನಗರ ಜಿಲ್ಲೆಯ  ಕ್ರೀಡಾಪಟುಗಳು ಮಿಂಚಿದ್ದು, ನಾಲ್ಕು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಹಾಗೂ ಒಂದರಲ್ಲಿ  ದ್ವಿತೀಯ ಸ್ಥಾನ ಪಡೆದರೆ ಗ್ರಾಮೀಣರು ಎರಡನೇ ಸ್ಥಾನದಲ್ಲಿರುವ ಮೂಲಕ ಉತ್ತಮ ಪ್ರದರ್ಶನ  ತೋರಿದ್ದಾರೆ. ವಿವಿಧ ಜಿಲ್ಲೆಗಳಿಂದ 1100ಕ್ಕೂ ಹೆಚ್ಚು ಸ್ಪಧಿಗಳು ಈ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲಿದ್ದು, ಈ ಟೂರ್ನಿಯನ್ನು ಇದೇ ತಿಂಗಳು 21 ರಿಂದ  ೨೫ರವರಗೆ  ರಾಂಚಿಯಲ್ಲಿ ನಡೆಯಲಿರುವ ೩೧ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಆಯ್ಕೆ ಟ್ರಯಲ್ಸ್ ಆಗಿ ಪರಿಗಣಿಸಲಾಗಿದೆ.
 
ಬೆಂಗಳೂರು ನಗರದ ಪೃ ಥ್ವಿ ಜಿ.ಎಂ 8೦೦ಮೀ. ಓಟದ ಸ್ಪರ್ಧೆಯಲ್ಲಿ 2.5.00 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕ ಗಿಟ್ಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.