ಮೊಹಾಲಿ ಟೆಸ್ಟ್: ಭಾರತಕ್ಕೆ 142 ರನ್‌ಗಳ ಮುನ್ನಡೆ
ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾಗಿರುವ...

Published On :
ಮೊಹಾಲಿ: ದಕ್ಷಿಣ ಅಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಸ್ಪಿನ್ ಬೌಲರ್‌ಗಳಿಗೆ ಅನುಕೂಲವಾಗಿರುವ ಮೊಹಾಲಿ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 184 ರನ್‌ಗಳಿಗೆ ಹಿಡಿದಿರಿಸಿದ ಟೀಂ ಇಂಡಿಯಾ ಎರಡನೇ ದಿನ ಪಂದ್ಯ ಅಂತ್ಯಗೊಂಡಾಗ 2 ವಿಕೆಟ್ ಕಳೆದುಕೊಂಡು 125 ರನ್ ದಾಖಲಿಸಿದೆ. ಮೊದಲ ಇನ್ಸಿಂಗ್ ನಲ್ಲಿ 17 ರನ್ ಮುನ್ನಡೆಯೊಂದಿಗೆ ಭಾರತವೀಗ 142 ರನ್‌ಗಳ ಮುನ್ನಡೆ ಸಾಧಿಸಿಕೊಂಡಿದೆ. 8 ವಿಕೆಟ್ ಕೈಯಲ್ಲಿದೆ.
ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ 63 ರನ್ ಕಲೆ ಹಾಕಿದ ಚೇತೇಶ್ವರ ಪೂಜಾರ ಮತ್ತು ಒಂದು ಬೌಂಡರಿ ಬಾರಿಸಿ 11 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.
ಎರಡನೇ ಇನ್ನಿಂಗ್ಸ್ ನಲ್ಲಿಯೂ ಶಿಖರ್ ಧವನ್ ಶೂನ್ಯ ಸಂಪಾದಿಸಿದಾಗ, ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕದ ಸಹಾಯದಿಂದ ಪಂದ್ಯವನ್ನು ಮೇಲೆತ್ತಿದ ಮುರಳಿ ವಿಜಯ್ 47 ರನ್ ದಾಖಲಿಸಿ ಔಟಾದರು. ಫಿಲಾಂಡರ್ ಎಸೆತಕ್ಕೆ ಧವನ್ ವಿಕೆಟ್ ಒಪ್ಪಿಸಿದರೆ, ಇಮ್ರಾನ್ ತಾಹಿರ್ ಮುರಳಿ ವಿಜಯ್‌ರ ವಿಕೆಟ್ ಕಸಿದುಕೊಂಡರು.
ಎರಡನೇ ಇನ್ನಿಂಗ್ಸ್‌ನಲ್ಲಿ 250 ರನ್‌ಗಳಿಂತ ಹೆಚ್ಚು ರನ್ ಗಳಿಸಿದರೆ ಭಾರತಕ್ಕೆ ಹೆದರುವ ಅಗತ್ಯವೂ ಇರಲ್ಲ. ಸ್ಪಿನ್ನರ್‌ಗಳ ಫೇವರಿಟ್ ಪಿಚ್ ಆಗಿರುವ ಮೊಹಾಲಿಯಲ್ಲಿ ಎರಡು ದಿನಗಳಲ್ಲಿ 22 ವಿಕೆಟ್ ಬಿದ್ದಿದೆ.
ಸ್ಕೋರ್
ಭಾರತ: 201, 125/2, ದಕ್ಷಿಣ ಆಫ್ರಿಕಾ -184
17 ರನ್ ಮುನ್ನಡೆಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿದಾಗ ಆರಂಭಿಕ ದಾಂಡಿಗ ಶಿಖರ್ ಧವನ್ ಡಕ್ ಔಟಾದರು. ತನ್ನ ಪಾದಾರ್ಪಣಾ ಪಂದ್ಯದಲ್ಲಿ ಶತಕ ಗಳಿಸಿದ್ದ ಮೊಹಾಲಿ ಅಂಗಣದಲ್ಲೇ ಧವನ್ ಸತತ ಎರಡನೇ ಬಾರಿ ಶೂನ್ಯದೊಂದಿಗೆ ಪೆವಿಲಿಯನ್‌ಗೆ ಮರಳಿದರು. ನಂತರ ವಿಜಯ್ ಮತ್ತು ಪೂಜಾರರ ಜತೆಯಾಟ ಟೀಂ ಇಂಡಿಯಾವನ್ನು ಮೇಲೆತ್ತುವಲ್ಲಿ ಸಫಲವಾಯಿತು. ಈ ಜೋಡಿ 86 ರನ್ ಗಳನ್ನು ಕಲೆ ಹಾಕಿದ್ದರು.
ಈ ಮೊದಲು 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ದಕ್ಷಿಣಾ ಆಫ್ರಿಕಾ ಭಾರತದ ಸ್ಪಿನ್ ದಾಳಿಗೆ ತತ್ತರಿಸಿ ಹೋಯಿತು. ದ. ಆಫ್ರಿಕಾ ನಾಯಕ ಡಿವಿಲಿಯರ್ಸ್ (63), ಹಾಷಿಂ ಆಮ್ಲ (43), ಡೀನ್ ಎಲ್‌ಗಾರ್ (37)ಗೆ ಮಾತ್ರ ಎರಡಂಕಿಯ ರನ್ ಗಳಿಸಲು ಸಾಧ್ಯವಾಯಿತು. ಎಲ್ಲ ವಿಕೆಟ್ ಕಬಳಿಸಿದ್ದು ಟೀಂ ಇಂಡಿಯಾದ ಸ್ಪಿನ್ನರ್ ಗಳೇ ಆಗಿದ್ದರು.
ರವಿಚಂದ್ರನ್ ಅಶ್ವಿನ್ 5 ವಿಕೆಟ್ ಕಬಳಿಸಿದಾಗ, ರವೀಂದ್ರ ಜಡೇಜಾ ಮೂರು ಮತ್ತು ಅಮಿತ್ ಮಿಶ್ರಾ ಎರಡು ವಿಕೆಟ್ ಗಳಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaದಕ್ಷಿಣ ಆಫ್ರಿಕಾSouth AfricaMohaliಮೊಹಾಲಿRavichandran Ashwinರವಿಚಂದ್ರನ್ ಅಶ್ವಿನ್Cheteshwar Pujaraಚೇತೇಶ್ವರ ಪೂಜಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


