ಹಜೇಲ್ ಕೀಚ್ ಜತೆ ಯುವರಾಜ್ ಮದುವೆ?
ಸುರೇಶ್ ರೈನಾ, ಹರ್ಭಜನ್ ಸಿಂಗ್ ಮದುವೆಯಾದ ನಂತರ ಇದೀಗ ಯುವರಾಜ್ ಸಿಂಗ್ ಕೂಡಾ ಮದುವೆಗೆ ಸಿದ್ಧರಾಗಿದ್ದಾರೆ...

Published On :
ಮುಂಬೈ : ಸುರೇಶ್ ರೈನಾ, ಹರ್ಭಜನ್ ಸಿಂಗ್ ಮದುವೆಯಾದ ನಂತರ ಇದೀಗ ಯುವರಾಜ್ ಸಿಂಗ್ ಕೂಡಾ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಈಗಾಗಲೇ ಕ್ಯಾನ್ಸರ್‌ನ್ನು ಗೆದ್ದಿರುವ ಯುವರಾಜ್ ಸಿಂಗ್, ಮುಂದಿನ ವರ್ಷ ಬಾಲಿವುಡ್ ನಟಿ ಹಜೇಲ್ ಕೀಚ್‌ನ ಕೈ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 13ರಂದು 34 ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಮದುವೆಯಾಗಬೇಕೆಂದು ಯುವಿ ಬಯಸಿದ್ದರಂತೆ. ಆದರೆ ಸಂಬಂಧಿಕರೊಬ್ಬರು ಮರಣಹೊಂದಿರುವುದರಿಂದ ಈ ವರ್ಷ ಮದುವೆಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬಲ್ಲಮೂಲಗಳು ಹೇಳಿರುವುದಾಗಿ ವರದಿಯಾಗಿದೆ.
ಹಜೇಲ್ ಹಲವಾರು ಬಾರಿ ಯುವಿ ಜತೆಗೆ ಕಾಣಿಸಿಕೊಂಡದ್ದೂ ಇದೆ.
ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ ಬಾಡಿಗಾರ್ಡ್ ಚಿತ್ರದಲ್ಲಿ ಕರೀನಾ ಕಪೂರ್ ಳ ಗೆಳತಿಯಾಗಿ ಹಜೇಲ್ ನಟಿಸಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
LoveCricketಕ್ರಿಕೆಟ್ಸಲ್ಮಾನ್ ಖಾನ್MarriageBollywoodಬಾಲಿವುಡ್Yuvraj Singhಯುವರಾಜ್ ಸಿಂಗ್Hazel Keechಹಜೇಲ್ ಕೀಚ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


