ಕ್ರೀಡೆ

ಕುಸ್ತಿ ಲೀಗ್ ನಲ್ಲಿ ಯೋಗೇಶ್ವರ್ ದತ್ ದುಬಾರಿ

ಒಲಿಂಪಿಕ್ ಪದಕ ವಿಜೇತರಾದ ಯೋಗೇಶ್ವರ್ ದತ್ ಮತ್ತು ಸುಶೀಲ್ ಕುಮಾರ್ ಮಂಗಳವಾರ ನಡೆದ ಮುಂಬರುವ ಪ್ರೊ ಕುಸ್ತಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ..

ಕುಸ್ತಿ ಲೀಗ್ ನಲ್ಲಿ ಯೋಗೇಶ್ವರ್ ದತ್ ದುಬಾರಿ
ಯೋಗೇಶ್ವರ್ ದತ್
Published On :

ಒಲಿಂಪಿಕ್ ಪದಕ ವಿಜೇತರಾದ ಯೋಗೇಶ್ವರ್ ದತ್ ಮತ್ತು ಸುಶೀಲ್ ಕುಮಾರ್ ಮಂಗಳವಾರ ನಡೆದ ಮುಂಬರುವ ಪ್ರೊ ಕುಸ್ತಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಬೆಲೆಗೆ ಬಿಕರಿಯಾಗಿದ್ದಾರೆ.

2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್ ಅತಿ ಹೆಚ್ಚು ಬಿಡ್ ಪಡೆಯುವ ಮೂಲಕ ಹರಿಯಾಣ ತಂಡಕ್ಕೆ 39.70 ಲಕ್ಷ ರೂ.ಗೆ ಹರಾಜುಗೊಂಡರೆ, ಸುಶೀಲ್ ಕುಮಾರ್ 38.20 ಲಕ್ಷ ರೂ.ಗೆ ಉತ್ತರ ಪ್ರದೇಶ ತಂಡಕ್ಕೆ ಮಾರಾಟ ವಾಗಿದ್ದಾರೆ.ಆರು ಕುಸ್ತಿಪಟು ಗಳನ್ನೊಳಗೊಂಡ ದಿಗ್ಗಜರ ವಿಭಾಗದಲ್ಲಿ ಯೋಗೇಶ್ವರ್ ದತ್ ಮತ್ತು ಸುಶೀಲ್ ಕುಮಾರ್ ಸ್ಥಾನ ಪಡೆದಿದ್ದು, 33 ಲಕ್ಷ ರೂ. ಮೂಲ ಬೆಲೆ ಹೊಂದಿದ್ದರು.

ಮತ್ತೊಂದು ದಿಗ್ಗಜರ ವಿಭಾಗದಲ್ಲಿ ನರಸಿಂಗ್ ಯಾದವ್, ಮಹಿಳಾ ಕುಸ್ತಿಪಟು ಗೀತಾ ಪೋಗತ್, ಸ್ಟಾರ್ ಮಹಿಳಾ ವಿದೇಶಿ ಕುಸ್ತಿಪಟುಗಳಾದ ಅಮೆರಿಕದ ಅಡೆಲಿನ್ ಗ್ರೇಯ್ ಮತ್ತು ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್ ಸ್ಥಾನ ಪಡೆದಿದ್ದರು.ನರಸಿಂಗ್ ಯಾದವ್ 34.50 ಲಕ್ಷ ರೂ.ಗಳಿಗೆ ಬೆಂಗಳೂರು ತಂಡದ ಪಾಲಾದರೆ, ಪೋಗತ್ ದಿಗ್ಗಜರ ಮೂಲ ಬೆಲೆಗೆ ಪಂಜಾಬ್ ತಂಡದ ಪಾಲಾದರು. ಗ್ರೇಯ್ 37 ಲಕ್ಷ ರೂ.ಗೆ ಮುಂಬಯಿಗೆ ಹಾಗೂ ಮ್ಯಾಟ್ಸನ್ ಮೂಲ ಬೆಲೆಗೆ ಡೆಲ್ಲಿ ತಂಡಕ್ಕೆ ಹರಾಜುಗೊಂಡಿದ್ದಾರೆ.

ಹರಾಜಿನಲ್ಲಿ 50 ಕುಸ್ತಿಗಳು ಒಳಪಟ್ಟಿದ್ದರು. ಹರಾಜಿನಲ್ಲಿ ಪಾಲ್ಗೊಂಡಿದ್ದ ಆರು ಫ್ರಾಂಚೈಸಿಗಳು ತಲಾ 2 ಕೋಟಿ ರೂ.ಗಳನ್ನು ತಮ್ಮ ಆಟಗಾರರಿಗೆ ವೆಚ್ಚ ಮಾಡಿದವು. ಒಲಿಂಪಿಕ್ಸ್ ಕುಸ್ತಿ ನಿಯಮದನ್ವಯ ನಡೆಯುವ ಈ ಟೂರ್ನಿಯಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಈ ಪೈಕಿ 15 ಪಂದ್ಯಗಳು ಲೀಗ್ ಹಂತದ್ದಾಗಿರುತ್ತವೆ. ನಂತರ ಎರಡು ಸೆಮಿಫೈನಲ್ ಮತ್ತು ಒಂದು ಫೈನಲ್ ಪಂದ್ಯ ನಡೆಯಲಿದೆ.

ಲೀಗ್‌ನಲ್ಲಿ ಆರು ತಂಡಗಳಿದ್ದು, ಪ್ರತಿ ತಂಡ 9 ಕುಸ್ತಿಪಟುಗಳನ್ನು ಒಳಗೊಂಡಿರುತ್ತದೆ. ಅದರಲ್ಲಿ ಐವರು ಪುರುಷ ಮತ್ತು ನಾಲ್ವರು ಮಹಿಳಾ ಕುಸ್ತಿಪಟುಗಳಾಗಿರುತ್ತಾರೆ. ಪ್ರತಿ ತಂಡ ಗರಿಷ್ಠ ಐವರು ಭಾರತೀಯ ಮತ್ತು ನಾಲ್ವರು ವಿದೇಶಿ ಕುಸ್ತಿಪಟುಗಳನ್ನು ಒಳಗೊಂಡಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.