ಶ್ರೀನಿವಾಸನ್ ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಕುತ್ತು
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಗೆ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಆಯ್ಕೆಯಾಗುವ ಸಂಭವವಿದ್ದು, ಇದರಿಂದಾಗಿ ಎನ್. ಶ್ರೀನಿವಾಸನ್ ಅವಧಿಗೂ ಮುನ್ನವೇ...

ಮುಂಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಹುದ್ದೆಗೆ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಆಯ್ಕೆಯಾಗುವ ಸಂಭವವಿದ್ದು, ಇದರಿಂದಾಗಿ ಎನ್. ಶ್ರೀನಿವಾಸನ್ ಅವಧಿಗೂ ಮುನ್ನವೇ ಈ ಸ್ಥಾನವನ್ನೂ ಬಿಟ್ಟುಕೊಡಬೇಕಾಗಿ ಬಂದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಶ್ರೀನಿವಾಸನ್ ಬದಲಿಗೆ ಶಶಾಂಕ್ ಮನೋಹರ್ ಅವರನ್ನು ಪ್ರತಿಷ್ಠಾಪಿಸುವ ಸಂಬಂಧ ಮುಂದಿನ ಸೋಮವಾರ ಇಲ್ಲಿನ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಪ್ರಮುಖ ನಿರ್ಣಯ ಹೊರಹೊಮ್ಮು ಸಾಧ್ಯತೆಯಿಗದೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಐಸಿಸಿ ತನ್ನ ನೀತಿ ನಿಯಾಮಾವಳಿಯಲ್ಲಿ ಹೊಸ ಬದಲಾವಣೆ ತಂದಿತ್ತಲ್ಲದೇ, ಆಡಳಿತಾಂಗದ ಸಂಪೂರ್ಣ ಸ್ವರೂಪವನ್ನು ಬದಲಾಯಿಸಿತ್ತು. ಇದರೊಂದಿಗೆ ಶ್ರೀನಿವಾಸನ್ ಅವರನ್ನು ಐಸಿಸಿಯ ಮೊದಲ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ ಇತ್ತೀಚಿನ ಬಿಸಿಸಿಐ ನಡೆಯೂ ಶ್ರೀನಿವಾಸನ್ ಅವರ ಎರಡು ವರ್ಷಗಳ ಅವಧಿಯನ್ನು ಮೊಟಕುಗೊಳಿಸಲಿದೆ.
ಕ್ರಿಕ್ ಇನ್ಫೋ ವರದಿಯಂತೆ ಶ್ರೀನಿವಾಸನ್ ಈಗಲೂ ಐಸಿಸಿ ಮುಖ್ಯಸ್ಥರಾಗಿ ಮುಂದುವರಿಯುವುದು ಸರಿಯಾದ ಕ್ರಮವಲ್ಲ. ಶಶಾಂಕ್ ಮನೋಹರ್ ಬಿಸಿಸಿಐ ಮುಖ್ಯಸ್ಖರಾಗಿದ್ದೂ ಶ್ರೀನಿವಾಸನ್ ಭಾರತವನ್ನೂ ಐಸಿಸಿಯಲ್ಲಿ ಪ್ರತಿನಿಧಿಸುವುದು ಸಲ್ಲ ಎಂದು ಮಂಡಳಿಯ ಬಹುಪಾಲು ಸದಸ್ಯರ ನಿಲುವಾಗಿದೆ ಎನ್ನಲಾಗಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಜಾಲವೂ ಶ್ರೀನಿವಾಸನ್ ಗೆ ಉರುಳಾಗಿ ಪರಿಣಮಿಸಿತ್ತಲ್ಲದೇ, ಅಲ್ಲಿಂದಾಚೆಗೆ ಶ್ರೀನಿವಾಸನ್ ಹಲವಾರು ವಿಧದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರಲ್ಲದೇ. ಸ್ವಹಿತಾಸಕ್ತಿ ಸಂಘರ್ಷದ ಆರೋಪಕ್ಕೂ ಸಿಲುಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


