ನಾಲ್ಕು ವಿಕೆಟ್ ಕಬಳಿಸಿದ ವೇಗಿ ಆಂಡರ್ಸನ್ , ಪಾಕ್ ಪರ ಅರ್ಧ ಶತಕ ಸಿಡಿಸಿದ ಮಿಸ್ಬಾ
ವೇಗಿ ಜೇಮ್ಸ್ ಆಂಡರ್ಸನ್ ಆಕ್ರಮಣಕ್ಕೆ ತುತ್ತಾದ ಪಾಕಿಸ್ತಾನ, ಭಾನುವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನ್ನಿಂಗ್ಸ್ ...

ಶಾರ್ಜಾ: ವೇಗಿ ಜೇಮ್ಸ್ ಆಂಡರ್ಸನ್ ಆಕ್ರಮಣಕ್ಕೆ ತುತ್ತಾದ ಪಾಕಿಸ್ತಾನ, ಭಾನುವಾರ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 234 ರನ್ ಅಲ್ಪ ಮೊತ್ತಕ್ಕೆ ಕುಸಿಯಿತು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ 85.1 ಓವರ್‌ಗಳಲ್ಲಿ ಕೇವಲ 234 ರನ್ ಗಳಿಸಿ ಸರ್ವಪತನವಾಯಿತು.
ಪಾಕ್ ಪರ ನಾಯಕ ಮಿಸ್ಬಾವುಲ್ ಹಕ್((71 ರನ್, 212 ನಿಮಿಷ, 160 ಎಸೆತ, 7 ಬೌಂಡರಿ, 2 ಸಿಕ್ಸರ್) ಏಕಾಂಗಿ ಹೋರಾಟ ನಡೆಸಿದರು. ವಿಕೆಟ್‌ಕೀಪರ್-ದಾಂಡಿಗ ಸರ್ಫ್‌ರಾಝ್ ಅಹ್ಮದ್(39 ರನ್, 76 ಎಸೆತ, 3 ಬೌಂ.), ಶುಐಬ್ ಮಲಿಕ್(38 ರನ್,91ಎಸೆತ, 5 ಬೌಂ.), ಯೂನಿಸ್ ಖಾನ್(31 ರನ್, 58 ಎಸೆತ, 4 ಬೌಂ.) ಎರಡಂಕೆ ಸ್ಕೋರ್ ದಾಖಲಿಸಿದರು.
ಆರಂಭಿಕ ದಾಂಡಿಗ ಅಝರ್ ಅಲಿ ಇನಿಂಗ್ಸ್‌ನ ಮೂರನೆ ಓವರ್‌ನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಮುಹಮ್ಮದ್ ಹಫೀಝ್(27) ಹಾಗೂ ಮಲಿಕ್ 2ನೆ ವಿಕೆಟ್‌ಗೆ 44 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಲು ಯತ್ನಿಸಿದರು. ಸ್ಪಿನ್ನರ್ ಮೊಯಿನ್ ಅಲಿ ಈ ಪ್ರಯತ್ನವನ್ನು ವಿಫಲಗೊಳಿಸಿದರು.
ಒಂದು ಹಂತದಲ್ಲಿ 116 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಪಾಕ್‌ಗೆ ನಾಯಕ ಹಕ್ ಹಾಗೂ ಅಹ್ಮದ್ 6ನೆ ವಿಕೆಟ್‌ಗೆ 80 ರನ್ ಸೇರಿಸಿ ಆಧರಿಸಿದರು. ಈ ಇಬ್ಬರು ಬೇರ್ಪಟ್ಟ ನಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪಾಕ್ 85.1 ಓವರ್‌ಗಳಲ್ಲಿ 234 ರನ್ ಗಳಿಸಿ ತನ್ನ ಹೋರಾಟವನ್ನು ಕೊನೆಗೊಳಿಸಿತು.
ಇಂಗ್ಲೆಂಡ್‌ನ ಪರವಾಗಿ ಆ್ಯಂಡರ್ಸನ್(4-17) ಮಿತವ್ಯಯಿ ಎನಿಸಿದ್ದಲ್ಲದೆ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಸ್ಟುವರ್ಟ್ ಬ್ರಾಡ್(2-13), ಸಮಿತ್ ಪಟೇಲ್(2-85) ಹಾಗೂ ಮೊಯಿನ್ ಅಲಿ(2-49) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ಇನಿಂಗ್ಸ್ ಆರಂಭಿಸಿರುವ ಆಂಗ್ಲರು ದಿನದಾಟದಂತ್ಯಕ್ಕೆ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿತು. ಮೊಯೀನ್ ಅಲಿ(4) ಹಾಗೂ ನಾಯಕ ಅಲೆಸ್ಟೈರ್ ಕುಕ್(0) ಕ್ರೀಸ್‌ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್:
85.1 ಓವರ್‌ಗಳಲ್ಲಿ 234/10
(ಮಿಸ್ಬಾವುಲ್ ಹಕ್ 71, ಸರ್ಫ್‌ರಾಝ್ ಅಹ್ಮದ್ 39, ಶುಐಬ್ ಮಲಿಕ್ 38, ಯೂನಿಸ್ ಖಾನ್ 31, ಆ್ಯಂಡರ್ಸನ್ 4-17, ಬ್ರಾಡ್ 2-13, ಪಟೇಲ್ 2-85, ಅಲಿ 2-49)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


