ಗುಹಾಮ್ ವಿರುದ್ಧ ಪಂದ್ಯಕ್ಕೆ ಭಾರತ ತಂಡ ಪ್ರಕಟ
ಇದೇ ತಿಂಗಳು ತವರಿನ ಅಂಗಣದಲ್ಲಿ ನಡೆಯಲಿರುವ ಗುಹಾಮ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್...

ಇದೇ ತಿಂಗಳು ತವರಿನ ಅಂಗಣದಲ್ಲಿ ನಡೆಯಲಿರುವ ಗುಹಾಮ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ತಂಡದ ಕೋಚ್ ಸ್ಟೀಫನ್ ಕಾನ್ಸ್ ಟಾಂಟೀನ್ ಭಾರತ ತಂಡವನ್ನು ಪ್ರಕಟಿಸಿದ್ದಾರೆ.
ಭಾರತ-ಗುವಾಮ್ ನಡುವಿನ ಪಂದ್ಯ ಬೆಂಗಳೂರಿನ ಶ್ರೀಕಂಠೀರವ ಸ್ಟೇಡಿಯಂನಲ್ಲಿ ನ.12 ರಂದು ನಡೆಯಲಿದೆ. ಜೂನ್‌ನಲ್ಲಿ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಗುವಾಮ್ ವಿರುದ್ಧ ಅದರದೇ ನೆಲದಲ್ಲಿ 1-2 ರಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿತ್ತು.
‘ಡಿ’ ಗುಂಪಿನಲ್ಲಿ ಈ ತನಕ ಆಡಿರುವ ಎಲ್ಲ ಐದೂ ಪಂದ್ಯಗಳನ್ನು ಸೋತಿರುವ ಭಾರತ ಈಗಾಗಲೇ ಫೈನಲ್ ಸುತ್ತಿಗೆ ಅರ್ಹತೆ ಪಡೆಯುವ ಅವಕಾಶ ಕಳೆದುಕೊಂಡಿದೆ. ಗುಂಪು ಹಂತದಲ್ಲಿ ವಿಜೇತರಾಗುವ 8 ತಂಡಗಳು ಹಾಗೂ ನಾಲ್ಕು ಶ್ರೇಷ್ಠ ರನ್ನರ್ಸ್‌ಅಪ್ ತಂಡಗಳು(ಒಟ್ಟು 12 ತಂಡಗಳು) 2018ರ ಫಿಫಾ ವಿಶ್ವಕಪ್ ಹಾಗೂ 2019ರ ಎಎಫ್‌ಸಿ ಏಷ್ಯನ್ ಕಪ್ ಫೈನಲ್ಸ್‌ನ ಅಂತಿಮ ಅರ್ಹತಾ ಸುತ್ತಿಗೆ ತೇರ್ಗಡೆಗೊಳ್ಳಲಿದೆ.
ಭಾರತ ತಂಡ:
ಗೋಲ್‌ಕೀಪರ್‌ಗಳು: ಸುಬ್ರತಾ ಪಾಲ್, ಗುರುಪ್ರೀತ್ ಸಿಂಗ್ ಸಂಧು, ಕರಣ್‌ಜೀತ್ ಸಿಂಗ್,ಲಕ್ಷ್ಮೀಕಾಂತ್ ಕಟ್ಟಿಮನಿ.
ಡಿಫೆಂಡರ್‌ಗಳು: ಅರ್ನಬ್ ಮಂಡಳ್, ಸಂದೇಶ್ ಜಿಂಗಾನ್, ಐಬಾರ್ಲಂಗ್ ಖೋಗ್‌ಜೀ, ಲಾಲ್‌ಚುಯಾನ್‌ಮಾವಿಯಾ, ನಾರಾಯಣ್ ದಾಸ್, ಪ್ರೀತಂ ಕೊಟಲ್, ಅಗಿಸ್ಟೈನ್ ಫೆರ್ನಾಂಡಿಸ್, ರಾಬಿನ್ ಗುರಂಗ್.
ಮಿಡ್‌ಫೀಲ್ಡರ್‌ಗಳು: ಯುಗೆನ್ಸನ್ ಲಿಂಗ್ಡೊ, ಕೇವಿನ್ ಲೊಬೊ, ಸ್ನೇಹಜ್ ಸಿಂಗ್, ಪ್ರಣಯ್ ಹಲ್ದರ್, ಫ್ರಾನ್ಸಿಸ್ ಫೆರ್ನಾಂಡಿಸ್, ರಾವ್ಲಿನ್ ಬಾರ್ಗೆಸ್, ರಾಮಿಯೊ ಫೆರ್ನಾಂಡಿಸ್, ಬಿಕಾಶ್ ಜೈರು, ಹರ್ಮನ್‌ಜೋತ್ ಸಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


