ಆಸ್ಟ್ರೇಲಿಯನ್ ಓಪನ್: ಟೂರ್ನಿಯಿಂದ ಹೊರಬಿದ್ದ ಸೈನಾ
ವಿಶ್ವದ ನಂಬರ್ 1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಚೀನಾದ ವಾಂಗ್ ಶಿಕ್ಸಿಯಾನ್ ಅವರ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದಿದ್ದಾರೆ...
ಸಿಡ್ನಿ: ವಿಶ್ವದ ನಂಬರ್ 1 ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ನಲ್ಲಿ ಚೀನಾದ ವಾಂಗ್ ಶಿಕ್ಸಿಯಾನ್ ಅವರ ವಿರುದ್ಧ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದಿದ್ದಾರೆ.
ಹಾಲಿ ಚಾಂಪಿಯನ್ ಕೂಡ ಆಗಿರುವ ಸೈನಾ ನೆಹ್ವಾಲ್ ಅವರು ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರಿಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶುಕ್ರವಾರ ಚೀನದ ವಾಂಗ್ ಶಿಕ್ಸಿಯಾನ್ ಅವರೆದುರು 21-15, 21-13 ನೇರ ಸೆಟ್ ಗಳ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 5ನೇ ಕ್ರಮಾಂಕದ ವಾಂಗ್ ಅವರು ಪಂದ್ಯದ ಆರಂಭದಿಂದಲೂ ಬಿಗಿ ಹಿಡಿತ ಹೊಂದಿದ್ದರು.
ಪಂದ್ಯದ ಯಾವುದೇ ಹಂತದಲ್ಲಿಯೂ ಸೈನಾ ಅವರಿಗೆ ಮೇಲೇಳುವ ಅವಕಾಶ ನೀಡಲೇ ಇಲ್ಲ. ಹೀಗಾಗಿ ಅಂತಿಮವಾಗಿ 21-15, 21-13, ಅಂತರದಲ್ಲಿ 2ನೇ ಶ್ರೇಯಾಂಕದ ಭಾರತೀಯ ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ವಿರುದ್ಧ ವಾಂಗ್ ಶಿಕ್ಸಿಯಾನ್ ವಿಜಯವನ್ನು ಸಾಧಿಸಿದರು.
42 ನಿಮಿಷಗಳ ಕಾಲ ನಡೆದ ಈ ಹೋರಾಟದಲ್ಲಿ ಭಾರತದ ಸೈನಾ ನೆಹ್ವಾಲ್ ಅವರು ತಮ್ಮ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸದೇ ಬರೊಬ್ಬರಿ 8 ಸೆಟ್ ಗಳಲ್ಲಿ ಪರಾಜಿತರಾದರು. ಸೈನಾ ಅವರ ಸೋಲಿನೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾರತದ ಸವಾಲು ಕೊನೆಗೊಂಡಂತಾಗಿದೆ. ಉಳಿದ ಭಾರತೀಯ ಆಟಗಾರರು ಸಿಡ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಮುನ್ನವೇ ಪರಾಜಿತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

