ಫ್ರೆಂಚ್ ಓಪನ್: ಸಾನಿಯಾ, ಪೇಸ್, ಬೋಪಣ್ಣ ಮುನ್ನಡೆ
ಫ್ರೆಂಚ್ ಓಪನ್ ಟೆನಿಸ್ ಡಬಲ್ಸ್ ಪಂದ್ಯದಲ್ಲಿ ಭಾರತದ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ. 1 ಸಾನಿಯಾ ಮಿರ್ಜಾ...

ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಡಬಲ್ಸ್ ಪಂದ್ಯದಲ್ಲಿ ಭಾರತದ ಕ್ರೀಡಾಪಟುಗಳು ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ವಿಶ್ವ ನಂ. 1 ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಜರ್ಮನಿಯ ಜೂಲಿಯಾ ಜಾರ್ಜ್-ಚೆಕ್ ರಿಪಬ್ಲಿಕ್‌ನ ಬೋರ್‌ಬಾರ್ ಕ್ರೆಜಿಕೋವಾ ಜೋಡಿಯನ್ನು ಅನಾಯಾಸವಾಗಿ ಪರಾಭವಗೊಳಿಸಿದಾಗ, ಕಠಿಣ ಪ್ರಯತ್ನದ ಮೂಲಕ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಪೇಸ್ ಮತ್ತು ಕೆನಡಾದ ಡಾನಿಯಲ್ ನೆಸ್ಟ್‌ರ್ ಜೋಡಿ ಆಸ್ಟ್ರೇಲಿಯಾದ ಜೋಡಿಗಳಾದ ಜೇಮ್ಸ್ ಡಕ್ವರ್ತ್ -ಕ್ರಿಸ್ ಗುಸಿಯೋನ್ ಜೋಡಿಯನ್ನು 6-2, 5-7 , 7-5 ಅಂತರದಲ್ಲಿ ಪರಾಭವಗೊಳಿಸಿದೆ. ಅದೇ ವೇಳೆ ರೋಹನ್ ಬೋಪಣ್ಣ ಮತ್ತು ರುಮಾನಿಯಾದ ಪ್ಲೋರಿನ್ ಮೆರ್ಜಿಯಾ ಜೋಡಿ 5-7, 6-3, 6-4 ಅಂತರದಲ್ಲಿ ಸೆರ್ಬಿಯಾ ಜೋಡಿಯಾ ಫಿಲಿಪ್ ಕ್ರಿಜಿನೋವಿಚ್- ವಿಕ್ಟರ್ ಟ್ರೊಯ್ಕಿ ಜೋಡಿಯನ್ನು ಮಣಿಸಿ ಎರಡನೇ ಸುತ್ತಿಗೆ ಪ್ರವೇಶ ಪಡೆದಿದೆ.
ಇತ್ತ ಮಹೇಶ್ ಭೂಪತಿ- ನಿಕ್ ಕಿರ್‌ಗೋಯಿಸ್ ಜೋಡಿ ಮೊದಲನೇ ಪಂದ್ಯದಲ್ಲಿ ಪರಾಭವಗೊಂಡು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರೋಜರ್ ಫೆಡರರ್ ಮತ್ತು ಸ್ಟಾನ್ಲಿಸ್ಲೋವ್ ವಾವ್ರಿಂಕಾ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಮಾರಿಯಾ ಶರಪೋವಾ ಮೂರನೇ ಸುತ್ತು ತಲುಪಿದ್ದಾರೆ. ಸರೀನಾ ವಿಲಿಯಂಸ್. , ಆ್ಯಂಡಿ ಮುರ್ರೆ, ರಾಫೆಲ್ ನಡಾಲ್ ಮೊದಲಾದವರು ಮೊದಲ ಪಂದ್ಯವನ್ನು ಗೆದ್ದು ನಂತರದ ಸುತ್ತಿಗೆ ಅರ್ಹತೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


