ಗಾಸಿಪ್‍ಗೆ ಗುರಿಯಾದ ಲೂಯಿಸ್ ಹ್ಯಾಮಿಲ್ಟನ್
ಕಜ್ಜಿ ಹೋದ್ರೂ ಕಡಿತ ಹೋಗಲ್ಲ ಅಂತ ಅನ್ನೋ ಮಾತಿದೆ. ಹಾಗೇ, ಪ್ರೀತಿ ಹೋದ್ರೂ ಪ್ರೀತಿಸಿದವರ ಛಾಯೆ ಹೃದಯದಿಂದ ಬೇಗ ಮಾಸೋಲ್ಲ ಅನ್ನೋದು...

ಮೊನಾಕೊ: ಕಜ್ಜಿ ಹೋದ್ರೂ ಕಡಿತ ಹೋಗಲ್ಲ ಅಂತ ಅನ್ನೋ ಮಾತಿದೆ. ಹಾಗೇ, ಪ್ರೀತಿ ಹೋದ್ರೂ ಪ್ರೀತಿಸಿದವರ ಛಾಯೆ ಹೃದಯದಿಂದ ಬೇಗ ಮಾಸೋಲ್ಲ ಅನ್ನೋದು ಭಗ್ನಪ್ರೇಮಿಗಳ ಸಿದ್ಧಾಂತ. `ಇದು ಹೃದಯಗಳ ವಿಷಯ....' ಅಂತ ಸುಮ್ಮನಿರಬಹುದು.
ಆದರೆ, ಕೆಲವರಿರುತ್ತಾರೆ. ವರ್ಷಗಳಿಂದ ಪ್ರೀತಿಸಿ, ಜೊತೆಯಲ್ಲಿ ಸಂಸಾರ ಮಾಡಿಯೂ ಆಕೆಯಿಂದ ದೂರವಾದ ವಾರದಲ್ಲೇ ಮತ್ತೊಬ್ಬಳನ್ನು ಹುಡುಕಿಕೊಳ್ಳುತ್ತಾರೆ. ಅಂಥವರ ಪಟ್ಟಿಗೆ ಹೊಸ ಸೇರ್ಪಡೆ ಫಾರ್ಮುಲಾ ಒನ್ ಆಟಗಾರ ಲೂಯಿಸ್ ಹ್ಯಾಮಿಲ್ಟನ್.
ಮೊನ್ನೆ ಭಾನುವಾರ ನಡೆದ ಮೊನಾಕೊ ಜಿಪಿ ಸಂದರ್ಭದಲ್ಲಿ ಈ ವಿಶ್ವ ಚಾಂಪಿಯನ್, ಆಸ್ಟ್ರೇಲಿಯಾದ ಗಾಯಕಿ ಗಿಗಿ ಹ್ಯಾಡಿಡ್ ಜೊತೆ ಸುತ್ತಾಡಿದ್ದು ಈಗ ಗುಟ್ಟಾಗೇನೂ ಉಳಿದಿಲ್ಲ. ಎನ್‍ಡಿಟಿವಿ ಈ ಬಗ್ಗೆ ವರದಿ ಮಾಡಿದೆ. ಈಕೆ ಬರೀ ಸ್ನೇಹಿತೆಯೋ ಅಥವಾ ಪ್ರೇಯಸಿಯೋ ಎನ್ನುವುದು ಬಹಿರಂಗವಾಗಬೇಕಷ್ಟೇ.
ಅದಿರಲಿ, ಕಳೆದ ಆರು ವರ್ಷಗಳಿಂದ `ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ' ಎಂಬಂತೆ ಅನ್ಯೋನ್ಯವಾಗಿದ್ದ ಗಾಯಕಿ ನಿಕೋಲೆ ಶೆರಿಂಜರ್ ಅವರನ್ನು ಕಳೆದ ವಾರವಷ್ಟೇ ಹ್ಯಾಮಿಲ್ಟನ್ ದೂರ ಮಾಡಿಕೊಂಡಿದ್ದರು. ಅದಾಗಿ, ವಾರದೊಳಗೆ ಮತ್ತೊಬ್ಬಳ ಜೊತೆ ಸುತ್ತಾಡುತ್ತಿದ್ದಾರೆ. ಇದು ಈಗ ಹಲವರ ಗಮನ ಸೆಳೆದಿದ್ದು ಮಾಧ್ಯಮಗಳಲ್ಲಿ ಗಾಸಿಪ್ ಪ್ರಿಯರ ಆಹಾರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


